ಭ್ರಷ್ಟಚಾರ ಮತ್ತು ಅನ್ಯಾಯದ ವಿರುದ್ಧ ಯಾವುದೇ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗದೇ ಹೋರಾಟ ನಡೆಸುವುದಕ್ಕಾಗಿ ಮಂಡ್ಯದಲ್ಲಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ಎನ್.ಅಪ್ಪಾಜಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ವೇದಿಕೆಯು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಧ್ವನಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಪರವಾಗಿ ಮತ್ತು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ನಮ್ಮ ಉದ್ಧೇಶವಾಗಿದೆ ಎಂದು ಹೇಳಿದರು.
ಈ ವೇದಿಕೆಯು ಈಗಾಗಲೇ ರಾಜ್ಯಾದ್ಯಾಂತ ಜಿಲ್ಲೆ ಸಮಿತಿಗಳನ್ನು ರಚನೆ ಮಾಡಿ, ಹೋರಾಟ ಮಾಡುತ್ತಿದೆ. ಸಂವಿಧಾನ ಬದ್ಧವಾಗಿ ಯಾವುದೇ ಜಾತಿ ಮತ್ತು ಧರ್ಮ ರಹಿತವಾಗಿ ಸಮಾಜದ ಒಳಿತಿಗಾಗಿ ಹೋರಾಟ ಮಾಡುತ್ತಿದೆ, ಸಾಮಾನ್ಯ ಜನರಿಗೆ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನ ಕಚೇರಿಗಳಲ್ಲಿ ಮಾಹಿತಿಯನ್ನು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಹೋರಾಟ ಮಾಡುತ್ತಿದೆ. ವೇದಿಕೆಯು ಬಡಜನರ ನೊಂದವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಪದಾಧಿಕಾರಿಗಳ ಆಯ್ಕೆ
ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷರಾಗಿ ಸಿ. ಹನುಮಂತಯ್ಯ ಕೋಣನಹಳ್ಳಿ, ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀನಿವಾಸಶೆಟ್ಟಿ ಮದ್ದೂರು, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾಗಿ ಎಂ.ಚಾಮರಾಜು, ಎಂ.ಎನ್.ಪ್ರಸನ್ನಕುಮಾರ್, ಹರಿಕುಮಾರ್ ಹಾಗೂ ರಾಘವೇಂದ್ರ ಆವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ವಿ.ನಾಗರಾಜು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಗನ್ನಾಥ್, ಸಿ.ಡಿ.ಮಹೇಶ್, ಪತ್ರಿಕಾ ಕಾರ್ಯದರ್ಶಿಯಾಗಿ ಸತೀಶ್ ಬೂದನೂರು ಹಾಗೂ ಕಾನೂನು ಸಲಹೆಗಾರರಾಗಿ ಹೆಚ್.ಸಿ.ಆನಂದ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಸಿ.ಹನುಮಂತಯ್ಯ, ಶ್ರೀನಿವಾಸ್ ಶೆಟ್ಟಿ, ಎಂ.ಚಾಮರಾಜು, ಎಂ.ಎನ್.ಪ್ರಸನ್ನಕುಮಾರ್, ಕೆ.ವಿ.ನಾಗರಾಜು, ರಾಘವೇಂದ್ರ ಹಾಗೂ ಹೆಚ್.ಸಿ.ಆನಂದ್ ಉಪಸ್ಥಿತರಿದ್ದರು.




