ದೇಶದ ಸ್ವಾತಂತ್ರ್ಯಕ್ಕೆ ಮಹಾತ್ಮಗಾಂಧೀಜಿ ಆದರ್ಶ ಎಷ್ಟು ಮುಖ್ಯವೋ ಆಧುನಿಕ ಭಾರತದ ಪ್ರಗತಿಗೆ ಮೋದೀಜಿ ಯೋಜನೆಗಳು ಅಷ್ಟೇ ಮುಖ್ಯವಾಗಿವೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವಮುಖಂಡ ಅಶೋಕ್ಜಯರಾಂ ಹೇಳಿದರು.
ಮಂಡ್ಯ ನಗರದ ಹೊಳಲು ರಸ್ತೆಯಲ್ಲಿರುವ ಜೈನಸಮುದಾಯದ ಸ್ಮಶಾನ ಆವರಣದಲ್ಲಿ ಜಿಲ್ಲಾ ಬಿಜೆಪಿ ಮತ್ತು ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ ಆಯೋಜಿಸಿದ್ದ ಸೇವಾ ಪಾಕ್ಷಿಕ ಸಮಾರೋಪ ಮತ್ತು ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೆ.17ರಂದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಅವರ ಜನ್ಮದಿನದಿಂದ ಅ.2ರ ಮಹಾತ್ಮಗಾಂಧಿ ಜಯಂತಿ ವರಗೆ ಸೇವಾ ಪಾಕ್ಷಿಕ ಅಭಿಯಾನದಡಿ ದೇಶಾಧ್ಯತಂತ 17 ರೀತಿಯ ಸೇವಾ ಕಾರ್ಯಗಳು ಸಾಗಿವೆ, ಮಂಡ್ಯ ಜಿಲ್ಲೆಯಲ್ಲೂ ಅನೇಕ ಸೇವಾ ಸುಕಾರ್ಯಗಳು ಬಿಜೆಪಿ ಕಾರ್ಯಕರ್ತರಿಂದ ನಡೆದಿವೆ ಎಂದು ನುಡಿದರು.
ಇಂದು ಬಿಜೆಪಿ ಕಾರ್ಯಕರ್ತರು ಮತ್ತು ಜೈನಸಮಾನದವರೊಂದಿಗೆ ಸ್ವಚ್ಛತಾ ಅಭಿಯಾನ ನಡೆಸುತ್ತಿದೇವೆ, ಸುಮಾರು 3 ಎಕರೆ ಜೈನ ಸಮಾಜದ ಸ್ಮಶಾನದಲ್ಲಿ ಬೆಳೆದುಕೊಂಡಿರುವ ತ್ಯಾಜ್ಯವನ್ನು ಸ್ವಚ್ಛತೆ ಮಾಡುತ್ತಿದ್ದೇವೆ, ಒಂದು ಜೆಸಿಪಿ ಯಂತ್ರ ಬಳಕೆಯಾಗುತ್ತಿದೆ, ಗಿಡ-ಗಂಟೆ, ಅನಗತ್ಯ ವಸ್ತುಗಳನ್ನು ತೆಗೆದು ಸುಂದರ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಬಾರಿ ಜಗದೀಶ್ ಹೀರೇಮನಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಎಂ.ಬಿ.ರಮೇಶ್ವಿಶ್ವಕರ್ಮ, ರಾಜಸ್ತಾನ ಸಮಾಜದ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.




