Saturday, November 21, 2026

ಪ್ರಾಯೋಗಿಕ ಆವೃತ್ತಿ

ಸಾಧನೆಗೆ ಗುರು – ಗುರಿ ಅತ್ಯವಶ್ಯಕ : ರತ್ನಮ್ಮ

ಅತ್ಯುತ್ತಮ ಸಾಧನೆ ಮಾಡಲು ಗುರು ಮತ್ತು ಗುರಿ ಅತ್ಯವಶ್ಯಕ ಎಂದು ಜನಪರ ಟ್ರಸ್ಟ್ ಅಧ್ಯಕ್ಷೆ ವೈ.ಎಚ್.ರತ್ನಮ್ಮ ಹೇಳಿದರು.

ಮಂಡ್ಯ ನಗರದಲ್ಲಿರುವ ಸೇವಾಕಿರಣ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ವಿಶ್ವ ಶಿಕ್ಷಕ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಅಭಿನಂದನೆ ಮತ್ತು ವಯೋವೃದ್ಧರಿಗೆ ಸಿಹಿ-ಹಣ್ಣು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಎಲ್ಲಾ ಕ್ಷೇತ್ರಗಳ ಪ್ರಗತಿ ಕಾಣಲು ಶಿಕ್ಷಣ ಕ್ಷೇತ್ರವೇ ಮೂಲಾಧರ, ಇಂತಹ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕೊಡುಗೆ ಅಪಾರ, ಸಮಾಜ ಎಂದಿಗೂ ಶಿಕ್ಷಕ ವೃತ್ತಿಯನ್ನು ಕಡೆಗಣಿಸದು, ಗೌರವಯುತವಾಗಿ ನಡೆಸಿಕೊಳ್ಳುತ್ತದೆ ಎಂದು ನುಡಿದರು.

ರಾಷ್ಟ್ರೀಯ ಮಾನವಹಕ್ಕುಗಳ ತರಬೇತಿದಾರ ವಕೀಲ ಎಂ.ಗುರುಪ್ರಸಾದ್, ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಬಹಳ ಜವಬ್ದಾರಿಯುತವಾದ ಕ್ಷೇತ್ರವಾಗಿದೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ತಿಳಿಸಿದರು.

ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎನ್ನುವ ನಾಣ್ನುಡಿಗೆ ಶಿಕ್ಷಕರು ಎಚ್ಚರದಿಂದ ಸೇವೆ ಸಲ್ಲಿಸುತ್ತಿರುವುದ ನಾವು ನೋಡುತ್ತಿದ್ದೇವೆ, ಸದೃಡ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ವಿದ್ಯಾರ್ಥಿಗಳ ಮೂಲಕ ಸೇವೆ ಸಲ್ಲಿಸುತ್ತಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾಕಿರಣ ಟ್ರಸ್ಟ್ ಧರ್ಮದರ್ಶಿ ಜಿ.ವಿ. ಗುರು ಮಾತನಾಡಿ, ನನ್ನ 37 ವರ್ಷದ ಶಿಕ್ಷಕ ವೃತ್ತಿಯಲ್ಲಿ 8 ವರ್ಷ ಪ್ರಾಂಶುಪಾಲರಾಗಿ, 29 ವರ್ಷ ಉಪನ್ಯಾಸಕ ವೃತ್ತಿರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ಧೇನೆ, ಹೆಮ್ಮೆ ಮತ್ತು ತೃಪ್ತಿಕರ ಸೇವೆ ನೀಡಿದ್ದೇನೆ ಎಂದು ಸ್ಮರಿಸಿದರು.

ಖಾಸಗಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳು ಸರ್ಕಾರಿ ಶಾಲೆಗಳಲ್ಲಿ ಇರಲ್ಲ, ಇರದಿದ್ದರೂ ಸರ್ಕಾರಿ ಶಾಲೆ ಶಿಕ್ಷಕರು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಬೋಧಿಸುವುದು ದೊಡ್ಡ ಶ್ರಮ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಶಿಕ್ಷಕರಿಗೆ ಮಾತ್ರ ಹಿರಿಯ ಕಿರಿಯ ಶಿಷ್ಯಕೋಟಿ ಎಲ್ಲಂದರಲ್ಲಿ ನಮನ ಸಲ್ಲಿಸಿ, ದೊಡ್ಡ ದೊಡ್ದ ಹುದ್ದೆಗಳಲ್ಲಿದ್ದರೂ ಅಪಾರವಾಗಿ ಗೌರವ ನೀಡುವುದು, ಇಂತಹ ಪವಿತ್ರ ಶಿಕ್ಷಕ ವೃತ್ತಿಯಲ್ಲಿ ಧನ್ಯತೆ ಕಾಣದಿರುವುದು ವಿಷಾಧನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಪೋತೇರ ಮಹದೇವು, ಜ್ಯೋತಿಷಿ ಶಿವಪ್ರಸಾದ್‌ಗುರು, ಮೈಸೂರು ಜಿಲ್ಲಾ ಅಧ್ಯಕ್ಷೆ ಮಂಜುಳಾ ರಮೇಶ್, ಸಂಚಾಲಕಿ ಸುಧಾಆರಾಧ್ಯ, ಶಿಕ್ಷಕ ಕೆ.ಆರ್.ಶಶಿಧರಈಚಗೆರೆ, ಅಭಿನಂದಿತ ಶಿಕ್ಷಕರಾದ ಶಿವಮ್ಮ, ಕೆ.ಟಿ.ರಾಜು, ಪ್ರಶಾಂತ್, ಶ್ಯಾಮಲತಾ, ಮಹಾಲಿಂಗಯ್ಯ, ಜೆ. ರಾಜು, ಆಶಾರಾಣಿ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ