Friday, November 20, 2026

ಪ್ರಾಯೋಗಿಕ ಆವೃತ್ತಿ

ಬೈಕ್ ಕಳ್ಳನ ಬಂಧನ : 30 ಬೈಕ್ ಗಳ ವಶ

ಚನ್ನಪಟ್ಟಣ ಸೇರಿದಂತೆ ಮಂಡ್ಯ ಜಿಲ್ಲೆಯ ವಿವಿಧೆಡೆ ಸುಮಾರು 30 ಬೈಕ್ ಗಳನ್ನು ಕಳ್ಳತನ ಮಾಡಿದ್ದ ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದ ಅಭಿಷೇಕ ಅಲಿಯಾಸ್ ಅಭಿ (22 ) ಎಂಬ ಆರೋಪಿಯನ್ನು ಮದ್ದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಆತನಿಂದ  30 ಬೈಕ್‌ಗಳನ್ನು ವಶಕ್ಕೆ ಪಡೆದಿದ್ಧಾರೆ.

ಕಳೆದ ಸೆ.28ರಂದು ಮದ್ದೂರು ತಾಲ್ಲೂಕಿನ ಮಳ್ಳಹಳ್ಳಿ ಗ್ರಾಮದ ತಗಡೇಗೌಡ ಎಂಬುವವರು ಮದ್ದೂರು ಟೌನ್  ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಸ್ಟೇಂಡರ್ ಪ್ಲಸ್ ಬೈಕ್‌ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದರು.

ಈ ದೂರಿನ ಮೇರೆಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮದ್ದೂರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಸಂತೋಷ್ ನೇತೃತ್ವದಲ್ಲಿ ಅಧಿಕಾರಿ,  ಸಿಬ್ಬಂದಿಯವರ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಕಳ್ಳನನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದೆ ಎಂದು ಮಂಡ್ಯ ಜಿಲ್ಲಾ ಅಪಾರ ಪೋಲಿಸ್ ವರಿಷ್ಟಾಧಿಕಾರಿ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಆರೋಪಿಯು ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಬೈಕ್‌ಗಳು, ಮಂಡ್ಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1 ಬೈಕ್, ಬೆಸಗರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 3 ಬೈಕ್‌ಗಳು, ಮಳವಳ್ಳಿ ಠಾಣೆ ವ್ಯಾಪ್ತಿಯಲ್ಲಿ 2 ಬೈಕ್‌ಗಳು, ಬೆಳಕವಾಗಿ ಠಾಣೆ ವ್ಯಾಪ್ತಿಯಲ್ಲಿ 2 ಬೈಕ್‌ಗಳು ಹಾಗೂ ಚನ್ನಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1 ಬೈಕ್, ಮಂಡ್ಯ, ಸೆಂಟ್ರಲ್ ಠಾಣೆಯ ವ್ಯಾಪ್ತಿಯಲ್ಲಿ 4 ಬೈಕ್‌ಗಳು, ಕೆ.ಎಂ.ದೊಡ್ಡಿ ಠಾಣಿ ವ್ಯಾಪ್ತಿಯಲ್ಲಿ 4 ಬೈಕ್‌ಗಳು ಕೆಸ್ತೂರು ಠಾಣಿ ವ್ಯಾಪ್ತಿಯಲ್ಲಿ 12 ಬೈಕ್‌ಗಳು, ಮಳವಳ್ಳಿ (ಗ್ರಾ) ಠಾಣಿ ವ್ಯಾಪ್ತಿಯಲ್ಲಿ 2 ಬೈಕ್ ಗಳು ಹಾಗೂ ಚನ್ನಪಟ್ಟಣ ಟೌನ್ ಠಾಣೆ ವ್ಯಾಪ್ತಿಯಲ್ಲಿ 1 ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ಧಾನೆ ಎಂದು ಹೇಳಿದರು.

ಒಟ್ಟು 30 ವಿವಿಧ ಕಂಪನಿಗಳ ಬೈಕ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದ್ದು, ಇವುಗಳ  ಒಟ್ಟು, ಮೌಲ್ಯ 11,10,000 ( ಹನ್ನೊಂದು ಲಕ್ಷದ ಹತ್ತು ಸಾವಿರ) ರೂ. ಗಳೆಂದು ಅಂದಾಜಿಸಲಾಗಿದೆ. ಮದ್ದೂರು ಪೊಲೀಸರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಶ್ಲಾಘಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ