ಜಾ.ದಳ (ಜಾತ್ಯತೀತ) ಪಕ್ಷದ ಜಿಲ್ಲಾ ವಕ್ತಾರರಾಗಿ ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಅವರನ್ನು ನೇಮಕ ಮಾಡಿ ಜಾ.ದಳ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ.
ತಾವು ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು, ಸುದ್ದಿ ಮಾಧ್ಯಮಗಳಲ್ಲಿ, ನಮ್ಮ ಪಕ್ಷದ ಕಾರ್ಯಕ್ರಮಗಳು ಮತ್ತು ಪಕ್ಷದ ಸರ್ಕಾರಗಳು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತೀರೆಂದು ಆಶಿಸುತ್ತೇವೆ ಎಂದು ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಶುಭ ಕೋರಿದ್ದಾರೆ.
ಮಂಡ್ಯ ಜಿಲ್ಲಾ ವಕ್ತಾರರಾಗಿ ನೇಮಕವಾದ ರಘುನಂದನ್ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿನಂದಿಸಿ, ಜಿಲ್ಲೆಯಲ್ಲಿ ಜಾ.ದಳ ಪಕ್ಷವನ್ನು ಸಂಘಟಿಸಿ ಬಲ ಪಡಿಸಬೇಕೆಂದು ತಿಳಿಸಿದ್ದಾರೆ.




