Saturday, November 21, 2026

ಪ್ರಾಯೋಗಿಕ ಆವೃತ್ತಿ

ತಲಕಾವೇರಿಯಲ್ಲಿ ಕಾವೇರಿ ತೀರ್ಥೋಧ್ಬವದ ಸಂಭ್ರಮ

ಕಾವೇರಿ ನದಿಯ ಉಗಮ ಸ್ಥಾನ ಕೊಡಗಿನ ತಲಾಕಾವೇರಿಯಲ್ಲಿ ಕಾವೇರಿ ತೀಥೋದ್ಭವದ ಸಂಭ್ರಮದಲ್ಲಿ ಸಾವಿರಾರು ಭಕ್ತರು ಕಾವೇರಿ ಪುಷ್ಕರಣೆಯಲ್ಲಿ ಮಿಂದು ಪುಣ್ಯಸ್ನಾನ ಮಾಡಿದರು.

ಈ ವರ್ಷ ಅ.17ರ ಸಂಜೆ ಮೇಷ ಶುಭ ಲಗ್ನದಲ್ಲಿ ನಡೆದ ತೀಥೋತ್ಭವದಲ್ಲಿ ಕಾವೇರಿ ತಾಯಿಗೆ ಶಾಸ್ತ್ರೋಕ್ತವಾಗಿ  ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಭಕ್ತರು ಕಾವೇರಿಯಲ್ಲಿ ಮಿಂದು ಪುನೀತರಾದರು.

ತಿಂಗಳು ಪೂರ್ತಿ ಸಂಭ್ರಮ 

ಮಡಿಕೇರಿ ಜಿಲ್ಲೆಯಲ್ಲಿ ದಸರಾ ಮತ್ತು ಕಾವೇರಿ ಸಂಕ್ರಮಣ ವಿಶೇಷ ಉತ್ಸವಗಳು, ದಸರಾ ಸಂಭ್ರಮ ಒಂದು ದಿನಕ್ಕೆ ಮೀಸಲಾದರೆ, ಕಾವೇರಿ ಜಾತ್ರೆ ತುಲಾ ಸಂಕ್ರಮಣದಿಂದ ಕಿರು ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ನಡೆಯಲಿದೆ.

ತಲಕಾವೇರಿಯಲ್ಲಿ ತೀರ್ಥೋದ್ಭವ ಜರುಗಿದ ಮರುದಿನ ಮೂರ್ನಾಡು ಸಮೀಪದ ಬಲಮುರಿ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗುತ್ತಾರೆ.

ಜಾತ್ರೆಯ ಅಂಗವಾಗಿ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಅಕ್ಷಯಪಾತ್ರೆ ಇರಿಸಿ ನಂದಾದೀಪವನ್ನು ಉರಿಸಲಾಗಿದ್ದು, ನಂದಾದೀಪವು ಒಂದು ತಿಂಗಳ ಕಾಲ ತುಪ್ಪದಲ್ಲಿ ಉರಿಯಲಿದೆ. ಭಕ್ತರು ಬೆಳೆದ ಅಕ್ಕಿಯನ್ನು ಅಕ್ಷಯಪಾತ್ರೆಗೆ ಸುರಿಯಲಾಗಿದ್ದು ಪಡಿಯಕ್ಕಿ ರೂಪದಲ್ಲಿ ಪ್ರಸಾದವನ್ನು ಒಂದು ತಿಂಗಳಕಾಲ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ.

ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 26ನೇ ವರ್ಷದ ಕಾವೇರಿ ರಥಯಾತ್ರೆ ಮಂಗಳವಾರ ಭಾಗಮಂಡಲದಿಂದ ಆರಂಭಗೊಳ್ಳಲಿದ್ದು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಪೇರೂರು ಬಲ್ಲಮಾವಟಿ, ಚೋನಕೆರೆ, ನಾಪೋಕ್ಕು ಊರುಗಳಲ್ಲಿ ಭಕ್ತರಿಗೆ ಕಾವೇರಿ ತೀರ್ಥ ವಿತರಣೆ ಮಾಡಲಿದೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ತಿಳಿಸಿದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ