Sunday, November 22, 2026

ಪ್ರಾಯೋಗಿಕ ಆವೃತ್ತಿ

ಹಾಲಹಳ್ಳಿ ಸ್ಲಂ ನಿವಾಸಿಗಳ ಗೋಳು ಕೇಳೋರ್‍ಯಾರು ?


  • ಸ್ಲಂ ನಿವಾಸಿಗಳ ಮನೆಗಳಿಗೆ ವಿದ್ಯುತ್ ಸರಬರಾಜು ಕಡಿತ

  • ರಾತ್ರಿ ಇಡೀ ಕತ್ತಲಲ್ಲೇ ಕಾಲ ಕಳೆದ ನಿವಾಸಿಗಳು

ಮಂಡ್ಯ ನಗರದ ಹಾಲಹಳ್ಳಿ ಸ್ಲಂ ಬೋರ್ಡ್ ನ ನಿವಾಸಿಗಳು ಅಕ್ಷರಶಃ ಕತ್ತಲ ಕೂಪಕ್ಕೆ ತಳ್ಳಪಟ್ಟಿದ್ದಾರೆ. ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ವಿದ್ಯುತ್ ಸರಬರಾಜು ಇಲಾಖೆಯ ಇಲಾಖೆಗಳ ಬೇಜವಾಬ್ದಾರಿ ನಡವಳಿಕೆಯಿಂದಾಗಿ ನಿನ್ನೆ ರಾತ್ರಿಯಿಂದ ಅವರ ಬದುಕಲ್ಲಿ ಕತ್ತಲು ಅವರಿಸಿದೆ.

ನಿನ್ನೆ ಸಂಜೆ ಸೆಸ್ಕ್ ಕಂಪನಿಯು ಬೀದಿ ದೀಪಗಳ ವಿದ್ಯುತ್ ಸರಬರಾಜನ್ನು ಇದ್ದಕ್ಕಿದ್ದಂತೆ ಕಡಿತಗೊಳಿಸಿರುವುದರಿಂದ ಸ್ಲಂ ನಿವಾಸಿಗಳು ಮನೆಗಳಲ್ಲಿ ಲೈಟ್ ಗಳು, ಫ್ಯಾನ್ ಗಳು, ಟಿ.ವಿ ಇತರ ಯಾವುದೇ ಉಪಕರಣಗಳನ್ನು ಬಳಸದಂತಾಗಿದ್ದು, ಇಡೀ ರಾತ್ರಿ ಸೊಳ್ಳೆಗಳಿಂದ ಕಚ್ಚಿಸಿಕೊಂಡು ನರಕಯಾತನೆ ಅನುಭವಿಸಿದ್ದಾರೆ.

ಕಳೆದ 4 ತಿಂಗಳ ಹಿಂದೆ ಸ್ಲಂ ಬೋರ್ಡ್ ಇಲ್ಲಿನ ನಿವಾಸಿಗಳಿಗೆ ಮನೆಗಳ ನಂಬರನ್ನು ಕೊಟ್ಟು ಮನೆಗಳನ್ನು ಹಸ್ತಾಂತರಿಸಿತ್ತು. ಅನಂತರ ನಿವಾಸಿಗಳು ಇಲ್ಲಿ ಬಂದು ವಾಸ ಮಾಡಲು ಪ್ರಾರಂಭಿಸಿದರು. ಆದರೆ ಸ್ಲಂ ಬೋರ್ಡ್ ನ ಅಧಿಕಾರಿಗಳು ನಿವಾಸಿಗಳಿಗೆ ವಿದ್ಯುತ್ ಮೀಟರ್ ಗಳನ್ನು ಅಳವಡಿಸಿರಲಿಲ್ಲ, ಆದ್ದರಿಂದ ನಿವಾಸಿಗಳೇ ಕೊಕ್ಕೆಗಳನ್ನು ಬಳಸಿ ಲೈನ್ ಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡು ಜೀವಿಸುತ್ತಿದ್ದರು. ಆದರೆ ನಿನ್ನೆ ಸಂಜೆ ಯಾವುದೇ ಮಾಹಿತಿ ನೀಡದೇ ಆಗಮಿಸಿದ ಸೆಸ್ಕ್ ಕಂಪನಿಯ ನೌಕರರು ಏಕಾಏಕಿ ಬೀದಿ ದೀಪಗಳ ವಿದ್ಯುತ್ ಸಂಪರ್ಕ ತಂತಿಗಳನ್ನು ಕಡಿತಗೊಳಿಸಿ ಹೋದರು. ಇದರಿಂದ ಸ್ಲಂನಲ್ಲಿ ವಾಸವಿರುವ 632 ಕುಟುಂಬಗಳ ಸಾವಿರಾರು ಜನರು ವಿದ್ಯುತ್ ಇಲ್ಲದೆ ಕತ್ತಲಲ್ಲಿ ತತ್ತರಿಸಿ ಹೋಗಿದ್ದಾರೆ.

ಈ ಬಗ್ಗೆ ಸೆಸ್ಕ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪ್ರತಿ ಕುಟುಂಬದವರು ತಲಾ 2700 ರೂ. ಪಾವತಿಸಿ ಅಧಿಕೃತ ಸಂಪರ್ಕ ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಸ್ಲಂ ಬೋರ್ಡ್ ಅಧಿಕಾರಿಗಳು, ವಿದ್ಯುತ್ ಕಡಿತಗೊಳಿಸಿರುವ ಸೆಸ್ಕ್ ಕಂಪನಿ ನಮಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೈಚೆಲ್ಲಿ ಕೂತಿದ್ದಾರೆ. ಈ ಇಬ್ಬರ ಜಗಳದಲ್ಲಿ ಹಾಲಹಳ್ಳಿ ಸ್ಲಂ ಜನರ ಬದುಕು ಬೀದಿಗೆ ಬಂತು ನಿಂತಿದೆ.

ಈಗಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸ್ಲಂ ಜನರಿಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಒತ್ತಾಯಿಸಿದ್ದಾರೆ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ