Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಭೇಟಿ ನೀಡಿ ವೀಕ್ಷಿಸಿದ ಜೈನ ಸಾಧ್ವಿಗಳು

ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಇಂದು ನಾಲ್ವರು ಜೈನ ಸಾಧ್ವಿಗಳು ಭೇಟಿ ನೀಡಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಕಳೆದ ನಾಲ್ಕು ತಿಂಗಳಿಂದ ಮಂಡ್ಯ ನಗರದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದ ಜೈನ ಸಾಧ್ವಿಗಳಾದ ಗವಿಶ್ಣಾ ಶ್ರೀಜಿ, ಮೇರು ಪ್ರಭ, ಮಯಾಂಕ್ ಪ್ರಭ, ದಕ್ಷ ಪ್ರಭ ಅವರು ಚಾತುರ್ಮಾಸ ಮುಕ್ತಾಯಗೊಳಿಸಿ ತಮಿಳುನಾಡಿನೆಡೆಗೆ ಪ್ರಯಾಣ ಬೆಳೆಸುವ ಮಾರ್ಗಮಧ್ಯೆ ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು‌.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ನಂದಿನಿ ಉತ್ಪನ್ನಗಳು ಯಾವ ರೀತಿ ತಯಾರಾಗುತ್ತದೆ ಎಂಬುದನ್ನು ನೋಡಿ ಬಹಳ ಸಂತೋಷವಾಯಿತು. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆವರಣ ಮತ್ತು ಡೈರಿ ತುಂಬಾ ಸ್ವಚ್ಛವಾಗಿದೆ. ಇಲ್ಲಿ ತಯಾರಾಗುವ ನಂದಿನಿ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಒಳ್ಳೆಯದಾಗಿದೆ ಎಂದರು.

ಮನ್ ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಕಚೇರಿಗೆ ಭೇಟಿ ನೀಡಿ ಅವರಿಗೆ ಆಶೀರ್ವದಿಸಿದ ಸಾಧ್ವಿಗಳು, ಅವರು ಉತ್ತಮ ವ್ಯಕ್ತಿತ್ವ ಹೊಂದಿದ್ದು, ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು.
ತೇರಾ ಪಂತ್ ಸಮಾಜದ 40ಕ್ಕೂ ಹೆಚ್ಚು ಜನರು ಮನ್ ಮುಲ್ ವೀಕ್ಷಣೆ ಮಾಡಿ ಸಂತೋಷ ವ್ಯಕ್ತಪಡಿಸಿದರು.

ಯುವ ಮುಖಂಡರಾದ ಬಿ.ಆರ್. ಸುರೇಶ್, ಹೇಮಂತ್, ತೇರಾಪಂತ್ ಸಮಾಜದ ಅಧ್ಯಕ್ಷ ನರೇಂದರ್ ದಕ್, ಮಂತ್ರಿ ಮಹಾವೀರ್ ಬನ್ಸಾಲಿ, ದಿಲೀಪ್ ಕುಮಾರ್, ವಿಕಾಸ್ ಬನ್ಸಾಲಿ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ