Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಪಾನ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ʻಸ್ಯಾಂಡಲ್‌ವುಡ್‌ ಕ್ವೀನ್‌ʼ ರಮ್ಯಾ !

ಮೋಹಕ ತಾರೆ ರಮ್ಯ ಮಂಗಳವಾರ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜಪಾನ್‌ನಲ್ಲಿ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ರಮ್ಯಾ ಅವರಿಗೆ ಅಭಿಮಾನಿಗಳು ಮತ್ತು ಸ್ಯಾಂಡಲ್‌ವುಡ್‌ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಈ ನಡುವೆ ಸ್ಯಾಂಡಲ್‌ವುಡ್‌ನ ಜನಪ್ರಿಯ ಚಿತ್ರ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ʼಕೆಆರ್‌ಜಿ ಕನೆಕ್ಟ್ಸ್‌ʼ ವಿಶೇಷ ಭಾವಚಿತ್ರದ ಮೂಲಕ ʼಸ್ಯಾಂಡಲ್‌ವುಡ್‌ ಕ್ವೀನ್‌ʼಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ. ದಶಕದ ಕಾಲ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಎನ್ನಿಸಿಕೊಂಡಿದ್ದ ರಮ್ಯಾ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ʼಸ್ಯಾಂಡಲ್‌ವುಡ್‌ ಕ್ವೀನ್‌ʼ ಎಂದು ಕರೆಯತ್ತಾರೆ. ಆ ಬಿರುದಿಗೆ ಹೋಲುವಂತೆ ಬಾದಲ್‌ ನಂಜುಂಡಸ್ವಾಮಿ ʼಇಸ್ಪೀಟ್‌ʼ ಆಟದ ʼಕ್ವೀನ್‌ ಕಾರ್ಡ್‌ ಥೀಮ್‌ʼ ಬಳಸಿಕೊಂಡು ಬೆಂಗಳೂರಿನ ಯಲಹಂಕದಲ್ಲಿರುವ ಕಟ್ಟಡವೊಂದರ ಗೊಡೆಯ ಮೇಲೆ 35 ಅಡಿಯ ರಮ್ಯ ಅವರ ವಿಶೇಷ ಭಾವಚಿತ್ರವನ್ನು ಬಿಡಿಸಿದ್ದಾರೆ.

ಕಾರ್ತಿಕ್‌ ಗೌಡ ಒಡೆತನದ ʼಕೆಆರ್‌ಜಿ ಕನೆಕ್ಟ್ಸ್‌ʼ ಸಂಸ್ಥೆ ರಮ್ಯ ಅವರಿಗೆ ವಿಭಿನ್ನವಾಗಿ ಹುಟ್ಟು ಹಬ್ಬದ ಶುಭ ಕೋರುವ ಸಲುವಾಗಿ ಬಾದಲ್‌ ಅವರಿಂದ ಈ ವಿಶೇಷ ಭಾವಚಿತ್ರವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ʼಸ್ಯಾಂಡಲ್‌ವುಡ್‌ ಕ್ವೀನ್‌ʼ ಭಾವಚಿತ್ರದ ಮೇಕಿಂಗ್‌ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ʼಕೆಆರ್‌ಜಿ ಕನೆಕ್ಟ್ಸ್‌ʼ ರಮ್ಯ ಅವರಿಗೆ ಶುಭಾಶಯ ತಿಳಿಸಿದೆ. ಕ್ವೀನ್‌ ಶೈಲಿಯಲ್ಲಿ ತಮ್ಮ ಭಾವಚಿತ್ರ ಮೂಡಿಬಂದಿರುವುದನ್ನು ಕಂಡು ಅಚ್ಚರಿ ವ್ಯಕ್ತ ಪಡಿಸಿರುವ ರಮ್ಯಾ, ಕಲಾ ನಿರ್ದೇಶಕ ಬಾದಲ್‌ ನಂಜುಂಡಸ್ವಾಮಿ ಮತ್ತು ʼಕೆಆರ್‌ಜಿ ಕನೆಕ್ಟ್ಸ್‌ ʼ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!