ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಿ.3ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯ ಜಿಲ್ಲಾ ಜರ್ನ್ಲಿಸ್ಟ್ ಕ್ಲಬ್ ಉದ್ಘಾಟನೆ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಕೆ.ಕಬ್ಬನಹಳ್ಳಿ ಶಂಭು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮೇಯರ್ ವಾಸು ಸಮಾರಂಭ ಉದ್ಘಾಟಿಸುವರು. ಕ್ಲಬ್ ಅಧ್ಯಕ್ಷ ಕಬ್ಬನಹಳ್ಳಿ ಕೆ.ಶಂಭು ಅಧ್ಯಕ್ಷತೆ ವಹಿಸುವರು. ಪತ್ರಕರ್ತರ ಒತ್ತಡ ನಿವಾರಣೆಗೆ ಧ್ಯಾನದ ಪಾತ್ರ ಕುರಿತು ಪ್ರಜಾಸತ್ಯ ಪ್ರಾದೇಶಿಕ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮಧುಸೂದನ್ ಕೆ ವಿಷಯ ಮಂಡನೆ ಮಾಡುವರು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಖ್ಯಾತ ಅಂಕಣಕಾರ ಬಿ.ಚಂದ್ರೇಗೌಡ, ಮಧುಸೂದನ್ ಕೆ. ಅವರನ್ನು ಶಾಸಕ ಎಂ.ಶ್ರೀನಿವಾಸ್ ಅಭಿನಂದಿಸುವರು. ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಪತ್ರಕರ್ತ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮಾಡುವರು ಎಂದರು.
ಗೋಷ್ಠಿಯಲ್ಲಿ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಗುರುಬಸವಯ್ಯ, ಕಾರ್ಯಕಾರಿ ಮಂಡಳಿ ಸದಸ್ಯ ಚಂದ್ರಶೇಖರ್ ದ.ಕೋ.ಹಳ್ಳಿ, ಸಿ.ಬಸವರಾಜು ಉಪಸ್ಥಿತರಿದ್ದರು.




