Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ರಾಜ್ಯದ ಮೊದಲ ಮತಾಂತರ ನಿಷೇಧ ಕಾಯ್ದೆಯ ಪ್ರಕರಣ ಭಾರತಿನಗರದಲ್ಲಿ

ಹೊಸದಾಗಿ ಜಾರಿಗೆ ಬಂದಂತಹ  ಮತಾಂತರ ನಿಷೇಧ ಕಾಯ್ದೆಯ ನಂತರ,  ರಾಜ್ಯದ ಮೊದಲ ಪ್ರಕರಣದ ತೀರ್ಪು ಮಂಡ್ಯ ಜಿಲ್ಲೆಯಲ್ಲಿ ಹೊರಬಂದಿದೆ.

5 ಕ್ರಿಶ್ಚಿಯನ್ ಧರ್ಮೀಯ ಯುವಕರು ತನ್ನನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಆಮಿಷ ಒಡ್ಡಿದರು ಎಂದು ಹಿಂದೂ ಸಂಘಟನೆಯ ಯುವಕನೊಬ್ಬ  ಆರೋಪಿಗಳನ್ನು ಪೊಲೀಸ್ ಸ್ಟೇಷನ್ ಗೆ ಎಳೆದೊಯ್ದು ದೂರು ದಾಖಲಿಸಿದ್ದ.

ಪೋಲೀಸ್ ರು ತಮ್ಮ ಠಾಣ ಕ್ರೈಂ ನಂಬರ್ 301/22 ರ ಅಡ್ಡಿ FIR ದಾಖಲಿಸಿದ್ದರು.  ಆರೋಪಿಗಳಿಗೆ ಮದ್ದೂರು  ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ನಿರಾಕರಿಸಿತು. ಕಳೆದ 20 ದಿನಗಳಿಂದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.

ಆದರೆ ದಿನಾಂಕ 2 /12/ 22 ರಂದು ಮಂಡ್ಯದ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ಕೃಷ್ಣಪ್ರಸಾದ್ ರಾವ್  ಜಾಮೀನು ಮಂಜೂರು ಮಾಡಿದರು. ಆರೋಪಿಗಳು ನ್ಯಾಯಂಗ ಬಂಧನದಿಂದ ಶನಿವಾರ ಸಂಜೆ 7 ಗಂಟೆಗೆ ಬಿಡುಗಡೆಗೊಂಡರು.  ಆರೋಪಿಗಳ ಪರವಾಗಿ ನ್ಯಾಯವಾದಿ  ಬಿ.ಟಿ. ವಿಶ್ವನಾಥ್ (BTV)  ವಕಾಲತ್ತು ವಹಿಸಿದ್ದರು .

ಆರೋಪಿಗಳು ಕ್ರಿಶ್ಚಿಯನ್ ರೆ ಅಲ್ಲ ಅವರೂ ಹಿಂದೂಗಳೇ ಅ ಕಾರಣ, ಬೇರೆ ಹಿಂದೂಗಳನ್ನೂ ಕ್ರಿಶ್ಚಿಯನ್ ಧರ್ಮ ಸೇರಲು ಪ್ರಚೋದಿಸುವ ಪ್ರಶ್ನೇಯೇ ಇಲ್ಲಿ ಉದ್ಭವಿಸುವುದಿಲ್ಲ.

ಮತಾಂತರ ನಿಷೇಧ ಕಾಯ್ದೆ ಕಲಂ 4 ಪ್ರಕಾರ ಮತಾಂತರಗೊಂಡವನು ಅಥವಾ ಆತನ ಕುಟುಂಬದ ಸದಸ್ಯರು ಮಾತ್ರ ದೂರು ದಾಖಲಿಸಬರುತ್ತದೆ ಎಂದ ವಕೀಲರ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

700 ವರ್ಷ ಮುಸ್ಲಿಂ ದೊರೆಗಳು ಈ ದೇಶವನ್ನು ಆಕ್ರಮಿಸಿದ್ದರು ಮತ್ತು ಆಳಿದರು ಇಡೀ ಭಾರತ ಇಸ್ಲಾಮೀಕರಣಗೊಳಲಿಲ್ಲ.

400 ವರ್ಷ ಕ್ರಿಶ್ಚಿಯನ್ ನರು ಈ ದೇಶ ಆಳಿದ್ದರು ಭಾರತ ಕ್ರಿಶ್ಚಿಯನೀಕರಣ ಗೊಳಲಿಲ್ಲ.
ಸಾಮಾಜಿಕ ಅವಗಣನೆಗೆ ತುತ್ತಾದ ಕೆಳ ಜಾತಿಯ ಜನ ಮಾತ್ರ ಮತಾಂತರಗೊಂಡರು. ಪಾಂಪ್ಲೆಟ್ ಹಂಚಿ ಮತಾಂತರ ಮಾಡುತ್ತಾರೆ ಎನ್ನುವುದು ಹಾಸ್ಯಾಸ್ಫದ. ಸರಕಾರದ ಈ ಕಾಯ್ದೆ ಸಂವಿದಾನ ದ ಅನುಚ್ಛೇದ 25 ರ ವಿರುದ್ದವಾಗಿದೆ ಎಂದು ಕೂಡಾ ನ್ಯಾಯವಾದಿಗಳಾದ ಬಿ.ಟಿ.ವಿಶ್ವನಾಥ್  ವಾದ ಮಂಡಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ