ಮಂಡ್ಯ ಜಿಲ್ಲಾಡಳಿತ ಮಂಡ್ಯನಗರದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾವಂತ ಉದ್ಯೋಗಾಕಾಂಕ್ಷಿಗಳ ದೊಡ್ಡ ದಂಡೇ ಹರಿದು ಬಂದಿತ್ತು.
ಉದ್ಯೋಗಮೇಳದಲ್ಲಿ ಭಾಗವಹಿಸಲು ಸ್ಕಿಲ್ ಕನೆಕ್ಟ್ ಆನ್‍ಲೈನ್ ಮೂಲಕವೇ 8,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ನೊಂದಣಿ ಮಾಡಿಕೊಂಡಿದ್ದರು. ಅಲ್ಲದೇ ಹಲವು ಅಭ್ಯರ್ಥಿಗಳು ಆಫ್ ಲೈನ್ ಮೂಲಕವು ಸ್ಥಳದಲ್ಲೇ ಹೆಸರು ನೊಂದಣಿ ಮಾಡಿಕೊಳ್ಳುತ್ತಿದ್ದದ್ದು ಕಂಡು ಬಂತು.
ಮಹಿಳಾ ಅಭ್ಯರ್ಥಿಗಳು ಹಾಗೂ ಪುರುಷ ಅಭ್ಯರ್ಥಿಗಳಿಗೆ ಪ್ರತ್ಯೇಕ ನೋಂದಣಿಗಳ ಕೇಂದ್ರಗಳನ್ನು ತೆರೆಯಲಾಗಿತ್ತು. ನೋಂದಣಿಗಾಗಿ ಸಹಸ್ರಾರು ಅಭ್ಯರ್ಥಿಗಳು ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ಮೊದಲು ನೋಂದಣೀ ಮಾಡಿಕೊಂಡ ಅಭ್ಯರ್ಥಿಗಳನ್ನು ನಂತರ ಸಂದರ್ಶನದ ನಂತರ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯಿತು. ಮೇಳದಲ್ಲಿ ಒಟ್ಟು 103 ಕಂಪನಿಗಳು ಭಾಗವಹಿಸಿ ತಮಗೆ ಬೇಕಿರುವ ಕೌಶಲ್ಯವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳವ ಪ್ರಕ್ರಿಯೆ ನಡೆಸಿದವು.




