Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಪಂಚರತ್ನ ಯೋಜನೆಯಿಂದ ರಾಮ ರಾಜ್ಯ ನಿರ್ಮಾಣ

ಪಂಚರತ್ನ ಯೋಜನೆಯ ಐದು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ರಾಮ ರಾಜ್ಯ ನಿರ್ಮಾಣ ಮಾಡುತ್ತೇನೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮಳವಳ್ಳಿ ತಾಲ್ಲೂಕಿನಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಅವರು ಮಾತನಾಡಿದರು. ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡ್ತೇನೆ ಎಂದರು.

ಪಂಚರತ್ನ ಯೋಜನೆ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಈ ಯೋಜನೆಗಳನ್ನು ಜಾರಿಗೆ ತಂದರೆ ಎಷ್ಟೋ ಕುಟುಂಬಗಳು ನೆಮ್ಮದಿಯಿಂದ ಇರುತ್ತವೆ. ನಮ್ಮ ಕಾರ್ಯಕ್ರಮ ಜಾರಿ ತಂದರೆ ನಿಜವಾದ ರಾಮ ರಾಜ್ಯವಾಗುತ್ತೆ ಎಂದರು.

nudikarnataka.com

1996 ರಲ್ಲಿ ಬೆಳಕವಾಡಿಗೆ ಪ್ರಥಮವಾಗಿ ಬಂದಿದ್ದೆ. ಸೌಹಾರ್ದಯುತವಾಗಿ ಜನರು ಬೆಳಕವಾಡಿಯಲ್ಲಿ ಇದ್ದಾರೆ.ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು.ಉಚಿತ ಶಿಕ್ಷಣ ಮನೆ ಬಾಗಿಲಿಗೆ ದೊರಕಬೇಕು. ಖಾಸಗಿ ಶಾಲೆಯಲ್ಲಿ ಹೆಚ್ಚಿನ ಫೀಸ್ ಪಡೆಯುತ್ತಾರೆ.

ಪ್ರತಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಬೇಕು.ರೈತರಿಗೆ ಎಕರೆಗೆ 10 ಸಾವಿರ ಹಣ ಕೊಡುವ ಕಾರ್ಯಕ್ರಮ ಹಾಕಿಕೊಂಡಿದ್ದು,ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಬೇಕು.ಇದು ರೈತರಿಗೆ ಅನುಕೂಲ ಮಾಡುವಂತಹ ಯೋಜನೆ.ಯುವಕ- ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಕೆಲವಾಗುತ್ತೆ.ವಸತಿ ಕಲ್ಪಿಸುವ ಕೆಲಸವಾಗಬೇಕು ಎಂದರು.

ಐದು ಕಾರ್ಯಕ್ರಮವನ್ನ ಸಂಪೂರ್ಣವಾಗಿ ಜಾರಿ ಮಾಡದಿದ್ದರೆ ಜೆಡಿಎಸ್ ನ ವಿಸರ್ಜನೆ ಮಾಡ್ತೇನೆ.ನಮ್ಮ ಸರ್ಕಾರಕ್ಕೆ ನಿಮ್ಮೆಲ್ಲರ ಆಶೀರ್ವಾದ ಮಾಡಿ ಹಾರೈಸಿ ಎಂದು ಮನವಿ ಮಾಡಿದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ