Thursday, November 19, 2026

ಪ್ರಾಯೋಗಿಕ ಆವೃತ್ತಿ

ಸ್ಕಾಲರ್ ಶಿಫ್ ಇಲ್ಲ…ಲ್ಯಾಪ್ ಟಾಪ್ ಕೊಟ್ಟಿಲ್ಲ.. ಸರ್ಕಾರದ ವಿರುದ್ಧ ವಿದ್ಯಾರ್ಥಿನಿಯರ ಆಕ್ರೋಶ

”ಸ್ಕಾಲರ್ ಶಿಪ್ ಇಲ್ಲ… ಲ್ಯಾಪ್ ಟಾಪ್ ಕೊಟ್ಟಿಲ್ಲ, ಕಾಲೇಜಿಗೆ ಬರಲು ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ.. ಇವು ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಆಕ್ರೋಶದ ನುಡಿಗಳು.

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಪಂಚರತ್ನಯಾತ್ರೆ ಕೈಗೊಂಡು ಮಂಡ್ಯನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಮಹಿಳಾ ಕಾಲೇಜಿನ ಬಳಿ ಮಾತನಾಡಿದ ಹಲವು ವಿದ್ಯಾರ್ಥಿನಿಯರು, ಸರ್ಕಾರ ನಮಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಕಿಡಿಕಾರಿದರು.

ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ”ನಾನು ಸೆಕೆಂಡ್ ಇಯರ್ ಎಂ.ಕಾಂ ಓದುತ್ತಿದ್ದೇನೆ, ನನಗೆ ಸ್ಕಾಲರ್ ಶಿಫ್ ಬಂದಿಲ್ಲ, ಲ್ಯಾಪ್ ಟಾಪ್ ಕೊಟ್ಟಿಲ್ಲ. ನಮಗೆ ಲ್ಯಾಪ್ ಟಾಪ್ ಎಷ್ಟು ಅವಶ್ಯಕ ಗೊತ್ತಾ ? ತುಂಬಾನೇ ಅವಶ್ಯಕತೆ ಇದೆ ನೀವು ಕೊಡ್ಸಿಕೊಡ್ಲೆ ಬೇಕು.. ಪಿಜಿ ಸ್ಟುಡೆಂಟ್ ಗೆ ಯಾರು ಲ್ಯಾಪ್ ಕೊಟ್ಟಿಲ್ಲ. ನೀವು ದಯವಿಟ್ಟು ವಿದ್ಯಾರ್ಥಿಗಳು ಲ್ಯಾಪ್ ಟಾಪ್ ಕೊಡಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ