ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಮಂಡ್ಯನಗರದ ಗಾಂಧಿಭವನದಲ್ಲಿ ಜ.1ರಂದು ಬೆಳಿಗ್ಗೆ 11 ಗಂಟೆಗೆ ಭೀಮಾ ಕೋರೆಂಗಾವ್ ಮಹಾಯುದ್ಧದ ಅಸ್ಪೃಶ್ಯರ ವಿಜಯೋತ್ಸವ ಮತ್ತು ಮಹರ್ ರೆಜಿಮೆಂಟ್ ವೀರ ಯೋಧರಿಗೆ ನಮನ ಮತ್ತು ನೈಜ ಸ್ವತಂತ್ರ ಸಂಗ್ರಾಮ ಸಂಕಲ್ಪ ಸಮಾವೇಶ ನಡೆಯಲಿದೆ ಎಂದು ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದಲ್ಲಿ ಟಿ.ನರಸೀಪುರ ನಳಂದ ಬೌದ್ಧ ವಿಹಾರದ ಬೋದಿರತ್ನ ಬಂತೇಜಿ ಸಾನಿಧ್ಯ ವಹಿಸುವರು. ವೆಂಕಟಗಿರಿಯಯ್ಯ ಸಮಾರಂಭ ಉದ್ಘಾಟಿಸುವರು. ವಿಚಾರವಾದಿ ಕೆ.ಮಾಯಿಗೌಡ ಅವರು ವೀರಯೋಧರ ಸ್ತೂಪಕ್ಕೆ ಪುಷ್ಪಾರ್ಚನೆ ಮತ್ತು ನಮನ ಸಲ್ಲಿಸುವರು. ದಸಂಸ ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು ಎಂದರು.
ಪ್ರಗತಿಪರ ಚಿಂತಕ ಅಕರಲವಾಡಿ ನಾಗೇಂದ್ರ ಮುಖ್ಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಭುಗೌಡ, ಎಸ್.ಸಿ.ಎಸ್.ಟಿ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಕೆಂಪೂಗೌಡ, ಮುಖಂಡರಾದ ಜರ್ನಾಧನ್ ಬಾಬು, ವೈ ಥಾಮಸ್ ಬೆಂಜಮಿನ್ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ದಸಂಸ ಪದಾಧಿಕಾರಿಗಳಾದ ಶ್ರೀನಿವಾಸ್ ಕೆ.ಎಂ., ಸಿದ್ದರಾಜು, ಅನಂದ ಬಿ., ಎನ್.ಡಿ.ದೇವರಾಜು ಮತ್ತಿತರರು ಉಪಸ್ಥಿತರಿದ್ದರು.




