Sunday, November 22, 2026

ಪ್ರಾಯೋಗಿಕ ಆವೃತ್ತಿ

ಜ.2-12 ರವರೆಗೆ ಬೂತ್ ವಿಜಯ ಅಭಿಯಾನ : ನಿರ್ಮಲ್ ಕುಮಾರ್ ಸುರಾನಾ

ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು ಕಟ್ಟಕಡೆಯ ಮತಗಟ್ಟೆಯಲ್ಲಿಯೂ ಸಶಕ್ತಗೊಳಿಸಲು ಜನವರಿ 2 ರಿಂದ 12 ರವರೆಗೆ ರಾಜ್ಯದ ಪ್ರತಿ ಮತಗಟ್ಟೆಯಲ್ಲಿ “ಬೂತ್ ವಿಜಯ ಅಭಿಯಾನ”ವನ್ನು, ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಗಳು ಹತ್ತಿರವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ “ಡಬಲ್ ಇಂಜಿನ್ ಸರ್ಕಾರ” ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಿದೆ. ಶೋಷಿತ, ಬಡವ, ದಲಿತ, ರೈತ, ಮಹಿಳೆ ಹಾಗೂ ಯುವಕರೆಲ್ಲರ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.ಈಗಾಗಲೇ 45-46 ಸಾವಿರ ಬೂತ್ ಸಮಿತಿಗಳಾಗಿವೆ. ಪ್ರತಿ ಬೂತ್‌ ರಚನೆ ಮಾಡಿ,ಬೂತ್ ನಲ್ಲಿ ಪೇಜ್ ಪ್ರಮುಖರ ನಿಯುಕ್ತಿಗೊಳಿಸಿ ವಾಟ್ಸಾಪ್ ಗ್ರೂಪ್ ರಚಿಸಿ ಮಂಡಲ,ಜಿಲ್ಲಾ,ರಾಜ್ಯದೊಡನೆ ಜೋಡಣೆ ಮಾಡಲಾಗುವುದು.ಮನ್ ಕಿ ಬಾತ್ ಅನ್ನು ಪ್ರತಿ ಬೂತ್ ಮಟ್ಟದಲ್ಲಿ ಅಪ್ಲೋಡ್ ಮಾಡಲಾಗುವುದು. ನಂತರ ಪ್ರತಿ ಮತಗಟ್ಟೆಯಲ್ಲಿ 25 ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಲಾಗುವುದು ಎಂದರು.

ಜನವರಿ 12 ರಂದು “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ನಡೆಯುವ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಡಿಸೆಂಬರ್ 27-28 ರಂದು ಎಲ್ಲ ಮಂಡಲಗಳಲ್ಲಿ ಸಭೆ ನಡೆಸಿದ್ದೇವೆ .ಪ್ರತಿ ಶಕ್ತಿ ಕೇಂದ್ರಕ್ಕೆ ಹೊರಗಿನ ಅಲ್ಪಾವಧಿ ವಿಸ್ತಾರಕರ ನಿಯುಕ್ತಿ ಮಾಡಲಾಗಿದ್ದು, ಇವರು 5 ದಿನ ಪ್ರವಾಸ ಮಾಡಲಿದ್ದಾರೆ. ಜನವರಿ 2ರಿಂದ ರಂದು ಜಿಲ್ಲಾ ಪದಾಧಿಕಾರಿಗಳ ಸಭೆ ವಿಸ್ತಾರಕರ ನಿಯುಕ್ತಿ ಮಾಡಲಾಗಿದೆ. ಜನವರಿ 02 ರಂದು ಎಲ್ಲಾ ಮತಗಟ್ಟೆಗಳಲ್ಲಿ ಪ್ರಮುಖ ಕಾರ್ಯಕರ್ತರ ಉಪಸ್ಥಿತಿಯ ಜೊತೆಗೆ ಬೂತ್ ವಿಜಯ ಅಭಿಯಾನ ನಡೆಸಲಾಗುತ್ತದೆ.

ಪಕ್ಷದ ವತಿಯಿಂದ ಜನವರಿ 2ರಿಂದ ಜನವರಿ 12ರ ವರೆಗೆ ಬೂತ್ ವಿಜ‌ಯ ಅಭಿಯಾನ ನಡೆಸಲಿದ್ದು, ಇದು ಪಕ್ಷದ ಗೆಲುವಿಗೆ ಪೂರಕವಾಗಲಿದೆ. ರಾಜ್ಯದಾದ್ಯಂತ ಒಟ್ಟು 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನ ಇದಾಗಿದೆ.ಬೂತ್ ಗಳಲ್ಲಿ ಶೇ.100 ರಷ್ಟು ಮತದಾನ ಮಾಡುವ ರೀತಿಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಇದರ ಮುಂದಿನ ಹಂತವಾಗಿ ಜನವರಿ 21 ರಿಂದ 29ರ ವರೆಗೆ ಮನೆ-ಮನೆ ಅಭಿಯಾನ ನಡೆಯಲಿದ್ದು, ಹೊಸ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್,ವಿಧಾನ ಪರಿಷತ್ ಸದಸ್ಯ ದೇವೇಗೌಡ,ಮುಖಂಡರಾದ ಅಶೋಕ್ ಜಯರಾಂ, ಸಿದ್ದರಾಮಯ್ಯ, ಜಗದೀಶ್ ಹಿರೇಮನಿ,ಚಂದಗಾಲು ಶಿವಣ್ಣ,ವಕ್ತಾರ ಸಿ.ಟಿ.ಮಂಜುನಾಥ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ