Friday, November 20, 2026

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೇವೆ ಒದಗಿಸಲು ಬದ್ಧ : ಆಶಯ್

ವರದಿ : ಪಟೇಲ್ ರಾಮಕೃಷ್ಣ

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೇವೆಗಳನ್ನು ಒದಗಿಸಲು ಕೈಲಾದ ಸೇವೆಗಳನ್ನು ಮಾಡಲು ಮುಂದಾಗಿದ್ದೇನೆಂದು ಭಾರತೀ ಎಜುಕೇಷನ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್  ಮಧುಮಾದೇಗೌಡ ಹೇಳಿದರು.

ಭಾರತೀನಗರ ಸಮೀಪದ ಮೆಣಸಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವೇಳೆ ಶಾಲೆಯ ಶಿಕ್ಷಕರು ಮತ್ತು ಎಸ್ಡಿಎಂಸಿ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ತಂದೆ ಮಧು ಜಿ ಮಾದೇಗೌಡ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಾನು ಮದ್ದೂರು ಕ್ಷೇತ್ರದ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬಂತು. ಹಾಗಾಗಿ ಅಕ್ಷರ ದಾಸೋಹದ ಬಿಸಿ ಊಟಕ್ಕೆ ಕುಕ್ಕರ್ ಅನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ ಎಂದರು.

ಶಾಲೆಗಳು ಅಭಿವೃದ್ದಿಗೊಳ್ಳಬೇಕಾದರೆ ಶಾಲಾಭಿವೃದ್ದಿ ಸಮಿತಿ ಮತ್ತು ಶಿಕ್ಷಕರ ಪಾತ್ರ ಅತೀ ಮುಖ್ಯ. ಶಾಲೆಗಳ ಬಗ್ಗೆ ಎಲ್ಲಿಯವರೆಗೆ ಕಾಳಜಿ ಇರುತ್ತದೋ ಅಲ್ಲಿಯವರೆವಿಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ.
ಎಷ್ಟೋ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಗಮನಿಸಿದ್ದೇನೆ, ಮಕ್ಕಳಿಗೆ ಓದಲು ಬಹಳ ಆಸಕ್ತಿ ಇರುತ್ತದೆ, ಆದರೆ ಸೌಕರ್ಯಗಳಿರುವುದಿಲ್ಲ. ನಮ್ಮ ತಂದೆಯವರಿಗೆ ಅಧಿಕಾರ ಸಿಕ್ಕಿದೆ. ಶಾಲೆಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಮನವಿ ಸಲ್ಲಿಸಿದರೆ ಅಧಿಕಾರದ ಅವಧಿಯಲ್ಲಿ ಪಕ್ಷಾತೀತವಾಗಿ ಸೇವೆ ಸಲ್ಲಿಸಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಲತಾ ರಮೇಶ್, ತಾ.ಪಂ ಮಾಜಿ ಸದಸ್ಯ ಬಿ.ಗಿರೀಶ್,  ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯ ಆರ್.ಸಿದ್ದಪ್ಪ, ಎಸ್ಡಿಎಂಸಿ ಅಧ್ಯಕ್ಷ ಡಿ.ಸೋಮು, ಉಪಾಧ್ಯಕ್ಷೆ ಯಶೋಧಮ್ಮ, ಸದಸ್ಯರಾದ ಡಿ.ಮಾದು, ಡಿ.ಬಿ.ಬಸವರಾಜು, ಮಂಗಳ, ಸೋಮ, ನೇತ್ರಾವತಿ, ದೇವರಾಜು, ಜಯಲಕ್ಷ್ಮಿ,ಮರಿಲಿಂಗಶೆಟ್ಟಿ, ಶಿಕ್ಷಕಿ ವೆಂಕಟಲಕ್ಷ್ಮಿ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ