Saturday, November 21, 2026

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿ ಲೋಪದೋಷ ಸರಿಪಡಿಸುವ ಭರವಸೆ ಸಿಕ್ಕಿದೆ : ಸುಮಲತಾ

ಬೆಂಗಳೂರು ಮೈಸೂರು ಹೆದ್ದಾರಿಯ ಲೋಪದೋಷಗಳನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇನೆ, ಅವರು ಎಲ್ಲಾ ಲೋಪದೋಷಗಳನ್ನು ಸರಿಪಡಿಸುವ ಭರವಸೆ ನೀಡಿದ್ದಾರೆಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಾನು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದೆ. ಅವರು ಹೆದ್ದಾರಿಯ ಎಲ್ಲಾ ಲೋಪದೋಷಗಳನ್ನು ಸರಿಪಡಿಸುತ್ತೇನೆ ಎಂದಿದ್ದಾರೆ.
ಮುಂದಿನ ತಿಂಗಳು ಕಾಮಗಾರಿ ಅಂತ್ಯವಾಗುತ್ತಾ ಎಂದು ನನಗೆ ಗೊತ್ತಿಲ್ಲ. ಚುನಾವಣೆಗಾಗಿ ತರಾತುರಿಯಲ್ಲಿ ಮಾಡ್ತಾ ಇದ್ದಾರಾ ಎಂದು ನನಗೆ ಗೊತ್ತಿಲ್ಲ. ಅದನ್ನು ಅವರನ್ನೇ ಕೇಳಬೇಕು. ಪ್ರಮುಖ ಪಟ್ಟಣಗಳಿಗೆ ಎಂಟ್ರಿ ಎಕ್ಸಿಟ್ ಬೇಕು ಎಂದು ಕೇಳಿದ್ದೇವೆ. ಅದನ್ನು ಅಪ್ರೂವಲ್ ಮಾಡ್ತೀವಿ ಎಂದು ಅವರು ಹೇಳಿದ್ದಾರೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ಬಿಜೆಪಿ ಸೇರುವ ನಿರ್ಧಾರ ಮಾಡಿಲ್ಲ

ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ಆಗುವ ವಿಚಾರ ಇಲ್ಲ. ಪ್ಲೇಕ್ಸ್‌ನಲ್ಲಿ ಅವರವರ ಅಭಿಮಾನಕ್ಕೆ ನನ್ನ  ಫೋಟೋ‌ ಹಾಕ್ತಾರೆ. ಅದಕ್ಕೂ ನನಗೂ ಸಂಬಂಧವಿಲ್ಲ. ಸಚ್ಚಿದಾನಂದಗೆ ನನ್ನ ಬೆಂಬಲ‌ ಇದೆ ಎನ್ನುವುದು ಸೀಕ್ರೆಟ್ ಅಲ್ಲ. ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎಂದು ಓಪನ್ ಆಗಿ ಘೋಷಣೆ ಮಾಡಿದ್ದೇನೆ. ಹೀಗಾಗಿ ಸಚ್ಚಿ ಬ್ಯಾನರ್‌ನಲ್ಲಿ ನನ್ನ ಫೋಟೋ ಹಾಕೊಂಡಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿಕೊಂಡರೆ ನಾನು ಏನು ಮಾಡೋಕೆ‌ ಆಗಲ್ಲ ಎಂದರು.

ಸ್ವಾಭಿಮಾನಿ ಪಡೆ ಅಥವಾ ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಪಕ್ಷ ಕಟ್ಟುವ ಯೋಚನೆಯನ್ನು ಮಾಡಿಲ್ಲ. ಅಷ್ಟು ಶಕ್ತಿ ದೇವರು ನನಗೆ ಕೊಡಲಿ, ನೋಡೋಣಾ.  ಪಕ್ಷ ಸೇರ್ಪಡೆಯ ಬಗ್ಗೆ ನಾನು ಯಾವುದೇ ಸಭೆ ಮಾಡುತ್ತಿಲ್ಲ. ನಾನು ಹೋದ ಕಡೆ ಜನರನ್ನು ಪಕ್ಷ ಸೇರ್ಪಡೆ ಬಗ್ಗೆ ಕೇಳ್ತಾ ಇದೀನಿ, ಅವರು ಕೇಳ್ತಾ ಇದಾರೆ. ಜನರು ಸದ್ಯ ಸ್ವತಂತ್ರವಾಗಿರಿ ಎಂದು ಹೇಳಿದ್ದಾರೆ. ನಾನು ಯಾವುದೇ ನಿರ್ಧಾರ ಮಾಡಲ್ಲ, ಜನರು ಪಕ್ಷ ಸೇರ್ಪಡೆ ಬಗ್ಗೆ ಹೇಳ್ತಾರೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ