Saturday, November 21, 2026

ಪ್ರಾಯೋಗಿಕ ಆವೃತ್ತಿ

ಚಿರತೆ ದಾಳಿ : ಗಾಯಗೊಂಡ ರೈತ ಮಹಿಳೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅವ್ವೇರಹಳ್ಳಿ ಗ್ರಾಮದಲ್ಲಿ ರೈತ ಮಹಿಳೆಯೊಬ್ಬರು ಚಿರತೆ ದಾಳಿಯಿಂದಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ನಡೆದಿದೆ.

ಅವ್ವೇರಹಳ್ಳಿ ಗ್ರಾಮದ ದೇವರಾಜು ಎಂಬುವವರ ಪತ್ನಿ ಬಸಮ್ಮಣ್ಣಿ ಚಿರತೆ ದಾಳಿಗೆ ತುತ್ತಾದವರು. ಇವರನ್ನು ಚಿಕಿತ್ಸೆ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ 

ಅವ್ವೇರಹಳ್ಳಿ ಸುತ್ತಾಮುತ್ತ ಚಿರತೆಗಳಿರುವ ಬಗ್ಗೆ ಮೊದಲೇ ಗ್ರಾಮಸ್ಥರು ಆತಂಕದಲ್ಲಿದ್ದರು, ಇಂದು ಎಂದಿನಂತೆ ಜಾನುವಾರುಗಳನ್ನು ಕಟ್ಟಲು ಹೊರಗೆ ಬಂದ ರೈತ ಮಹಿಳೆ ಮೇಲೆ ಚಿರತೆಯೂ ಏಕಾಏಕಿ ದಾಳಿ ನಡೆಸಿದೆ, ಇದರಿಂದಾಗಿ ಗಾಯಗೊಂಡಿರುವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರಣ್ಯ ಇಲಾಖೆಯು ಚಿರತೆಯನನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ಧಾರೆ.

ಇತ್ತೀಚಿನ ದಿನಗಳಲ್ಲಿ ಆ ಭಾಗದಲ್ಲಿ ಚಿರತೆಗಳು ಅತಿ ಹೆಚ್ಚು ಸಂಚಾರಿಸುತ್ತಿದ್ದು ಹಸು ಕರುಗಳನ್ನು ಬೇಟೆಯಾಡುತ್ತಿದ್ದು, ಇದೀಗ ಜನರ ಮೇಲೆ ದಾಳಿ ನಡೆಸಲು ಮುಂದಾಗಿವೆ, ಹಲವಾರು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ರೀತಿಯ ಕ್ರಮ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ