ಬೆಂಗಳೂರಿನ ಭಾಗೀರಥಿ ನಾರಾಯಣರಾವ್ ಮಾನೆ ತಾಂತ್ರಿಕ ಕಾಲೇಜಿನ ಮಾಹಿತಿ ತಂತ್ರಜ್ಞಾನ ಪ್ರಾಧ್ಯಾಪಕರಾದ ಹೆಚ್.ಜಾಗೃತಿ ಅವರ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಪಿಎಚ್ಡಿ ಪದವಿಯನ್ನು ಘೋಷಿಸಿದೆ.
ಹೆಚ್.ಜಾಗೃತಿ ಅವರು ಕಂಪ್ಯೂಟರ್ ಅಂಡ್ ಇನ್ಫರ್ಮೇಶನ್ ಸೈನ್ಸ್ ವಿಭಾಗದಲ್ಲಿ ಡಾ.ಸಿ.ಕವಿತಾ ಅವರ ಮಾರ್ಗದರ್ಶನದಲ್ಲಿ ”ಅನಾಲಿಸಿಸ್ ಅಂಡ್ ಡಿಸೈನ್ ಆಫ್ ಸೆಕ್ಯೂರಿಟಿ ಟೆಕ್ನಿಕ್ಸ್ ಫಾರ್ ಐಓಟಿ ಯೂಸಿಂಗ್
ಡೀಪ್ ಲರ್ನಿಂಗ್”(Analysis and Design of Security Techniques for IoT Using
Deep Learning) ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ.
ಹೆಚ್.ಜಾಗೃತಿ ಅವರು ಮಂಡ್ಯ ತಾಲೂಕು ಕಾಳೇನಹಳ್ಳಿ ಗ್ರಾಮದ ನಿವೃತ್ತ ಪ್ರಾಂಶುಪಾಲ ಕೆ.ಎಚ್. ಹನುಮಂತೇಗೌಡ ಹಾಗೂ ಇಂದುಮತಿ ಅವರ ಪುತ್ರಿಯಾಗಿದ್ದಾರೆ.




