Friday, November 20, 2026

ಪ್ರಾಯೋಗಿಕ ಆವೃತ್ತಿ

ಬುದ್ಧಿ – ಭಾವದ ವಿಕಾಸಕ್ಕೆ ಪುಸ್ತಕಗಳ ಒಡನಾಟದ ಅಗತ್ಯ

ಬುದ್ಧಿ ಮತ್ತು ಭಾವದ ವಿಕಾಸಕ್ಕೆ ಪುಸ್ತಕಗಳ ಒಡನಾಟದ ಅಗತ್ಯವಿದೆ. ವೈಚಾರಿಕತೆಯ ಮನೋಭಾವ ಬೆಳೆಸುವ ಓದಿನ ದಾರಿಗೆ ಜನತೆ ಮರಳಲು ಸೂಕ್ತ ಕಾಲವಿದು. ಮೊದಲು ಟಿವಿ, ಸಿನಿಮಾ ನಮ್ಮ ಬದುಕನ್ನು ಆಕ್ರಮಿಸಿಕೊಂಡಿದ್ದವು. ಈಗ ಸಾಮಾಜಿಕ ಜಾಲತಾಣಗಳು ಆಕ್ರಮಿಸಿಕೊಂಡಿವೆ. ಇದರಿಂದಾಗಿ  ಓದುವ ಹವ್ಯಾಸ ಕ್ಷೀಣಿಸಿದೆ ಎಂದು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಹೇಳಿದರು.

ಮಂಡ್ಯನಗರದ ವಿವಿ ರಸ್ತೆಯ 2 ನೇ ಕ್ರಾಸ್ ನಲ್ಲಿರುವ ರೈತಬಂಧು ಮಂಡ್ಯ ಫೌಂಡೇಷನ್ ಕಚೇರಿಯಲ್ಲಿ ಪರಿಚಯ ಪ್ರಕಾಶನದ ನೇತೃತ್ವದಲ್ಲಿ ಇಂಡಿಯನ್ ಕಲ್ಚರಲ್ ಕಲೆಕ್ಟಿವ್, ಜಿಲ್ಲಾ ಯುವ ಬರಹಗಾರರ ಬಳಗ ಹಾಗೂ ಭೂಮಿಬೆಳಗು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಪರಿಚಯ ಪುಸ್ತಕ ಹಬ್ಬ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲೇಖಕನ ಅನುಭವದ ಜಗತ್ತನ್ನು ತೆರೆದಿಡುವ ಪುಸ್ತಕಗಳು ವಿಚಾರದ ಬೆಳಕನ್ನು ಬೀರುವ ಅನುಭವದ ದೀವಿಗೆಗಳು. ಇಂತಹ ಪುಸ್ತಕಗಳ ಓದುವ ಹವ್ಯಾಸದಿಂದ ಬಿಡುವಿನ, ಏಕಾಂತದ ಸಮಯದ ಸದ್ಬಳಕೆಗೆ ಸಹಕಾರಿಯಾಗುತ್ತದೆ ಎಂದರು.

ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ. ಕಿರಣ್ ಮಾತನಾಡಿ, ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಪುಸ್ತಕಗಳಲ್ಲಿನ ವಿಚಾರಗಳನ್ನು, ಸಂದೇಶಗಳನ್ನು ತಲುಪಿಸುವ ಮೂಲಕ ಜ್ಞಾನ ಬಿತ್ತುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಯೋಗೇಶ್, ಕರವೇ ವೀರ ಕನ್ನಡಿಗರ  ಘರ್ಜನೆ ಜಿಲ್ಲಾಧ್ಯಕ್ಷ ಎಂ.ಸಿ. ನವೀನ್, ಪರಿಚಯ ಪುಸ್ತಕ ಪ್ರಕಾಶನದ ಸಂಸ್ಥಾಪಕ ಎಂ.ಎನ್.ಶಿವಕುಮಾರ್ ಆರಾಧ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ