Saturday, November 21, 2026

ಪ್ರಾಯೋಗಿಕ ಆವೃತ್ತಿ

ನಗರಕೆರೆಯಲ್ಲಿ ವಿನುತಾ ಉದಯ್ ಗೆ ಬಾಗಿನ ಸಮರ್ಪಣೆ

ವರದಿ : ನ ಲಿ ಕೃಷ್ಣ

ಕದಲೂರು ಉದಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕದಲೂರು ಉದಯ್ ಹಾಗೂ ವಿನುತಾ ದಂಪತಿಗಳು ಸಂಕ್ರಾಂತಿಯ ಪ್ರಯುಕ್ತ ಮದ್ದೂರು ವಿಧಾನಸಭಾ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಬಾಗಿನ ಸಮರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿಶೇಷವಾಗಿ ನಗರಕೆರೆ ಗ್ರಾಮಸ್ಥರು ಬುಧವಾರ ವಿನುತಾ ಉದಯ್ ಅವರಿಗೆ ಬಾಗಿನ ಸಮರ್ಪಣೆ ಮಾಡಿ ಭಾತೃತ್ವ ಮೆರೆದು ಗಮನ ಸೆಳೆದಿದ್ದಾರೆ.

ಮಂಗಳವಾದ್ಯಗಳ ಸಮೇತ ಗ್ರಾಮಕ್ಕೆ ದಂಪತಿಗಳನ್ನು ಬರಮಾಡಿಕೊಂಡು ಶ್ರೀಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು.ಶ್ರೀಬಸವೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ವಿನುತಾ ಅವರಿಗೆ ನಗರಕೆರೆ ಗ್ರಾಮಸ್ಥರು ಬಾಗಿನ ಅರ್ಪಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನೆರದವರ ಹೃದಯ ತುಂಬಿ ಬಂದು, ಮದ್ದೂರು ತಾಲ್ಲೂಕಿನ ಎಲ್ಲಾ ಕುಟುಂಬಗಳಿಗೆ ಬಾಗಿನ ನೀಡುತ್ತಿರುವ ಕದಲೂರು ಉದಯ್ ಕುಟುಂಬದವರಿಗೆ, ನಗರಕೆರೆ ಗ್ರಾಮಸ್ಥರು ಬಾಗಿನ ಸಮರ್ಪಿಸಿ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ಅಪೂರ್ವ ಕಾರ್ಯಕ್ರಮವಾಗಿದೆ ಎಂದು ತಾ ಪಂ ಮಾಜಿ ಸದಸ್ಯ ಎನ್ ಎಲ್ ಯಶೋಧಮ್ಮ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಎನ್ ಕೆ ಶಶಿಕಲಾ, ಎನ್ ಸಿ ಮಂಜುಳಾ, ಪದ್ಮ ಲಿಂಗಪ್ಪ, ಸುಮಿತ್ರಾ ಶಿವಲಿಂಗಯ್ಯ, ಪ್ರವೀಣ್ ಕುಮಾರ್, ರೀತೇಶ್ ಗೌಡ, ಮಹೇಶ್ ಪ್ರಸನ್ನ, ಅಭಿ, ವಿಕಾಸ್ ಗೌಡ, ಜಯರಾಮ್, ಕಿರಣ್, ಶಿವಾನಂದ, ಯಜಮಾನ್ ಶಿವರಾಮೇಗೌಡ ಎನ್ ಎಮ್ ಲಿಂಗಪ್ಪ, ದೊಡ್ಡ ಚನ್ನಯ್ಯ, ಎನ್ ಎಮ್ ಕೃಷ್ಣ, ಎನ್ ಆರ್ ರವಿ, ಪ್ರಜ್ವಲ್, ಎನ್ ಕೆ ನಾಗರಾಜ್, ರಮೇಶ್, ಪಶುಪತಿ, ಅನಿಲ್ ಮತ್ತಿತರರಿದ್ದರು.

ಈ ವೇಳೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಗ್ರಾಮಸ್ಥರಿಗೆ ವಿ‌ನುತಾ ಉದಯ್ ಬಾಗಿನ ಅವರು ವಿತರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ