Friday, September 20, 2024

ಪ್ರಾಯೋಗಿಕ ಆವೃತ್ತಿ

ಕುಂದೂರು ಗ್ರಾ.ಪಂ.ಅಧ್ಯಕ್ಷರಾಗಿ ಶೈಲಶ್ರೀ ಷಡಕ್ಷರಿ ಆಯ್ಕೆ

ಮಳವಳ್ಳಿ ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೈಲಶ್ರೀ ಷಡಕ್ಷರಿ ಹಾಗೂ ಉಪಾಧ್ಯಕ್ಷರಾಗಿ ಮಹದೇವಮ್ಮ ವೆಂಕಟೇಶ್ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೈಲಶ್ರೀ ಹಾಗೂ ಜೆಡಿಎಸ್ ಬೆಂಬಲಿತ  ಅಭ್ಯರ್ಥಿ ಶಿವಮಲ್ಲು ನಾಮಪತ್ರ ಸಲ್ಲಿಸಿದ್ದರು. 16 ಸದಸ್ಯರ ಬಲದ ಕುಂದೂರು ಗ್ರಾ.ಪಂಗೆ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ 6 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೈಲಶ್ರೀ 10 ಮತಗಳನ್ನು ಪಡೆಯುವುದರ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮಹದೇವಮ್ಮ ಅವಿರೋಧವಾಗಿ ಆಯ್ಕೆಯಾದರು.

ನೂತನವಾಗಿ ಆಯ್ಕೆಯಾದ ಶೈಲಶ್ರೀ ಷಡಕ್ಷರಿ ಹಾಗೂ ಮಹದೇವಮ್ಮ ಅವರಿಗೆ ಇತರೆ ಸದಸ್ಯರು ಪುಷ್ಪಹಾರ ಹಾಕಿ ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!