Friday, November 20, 2026

ಪ್ರಾಯೋಗಿಕ ಆವೃತ್ತಿ

ವಿಜ್ಞಾನ ವಸ್ತು ಪ್ರದರ್ಶನ : ರಾಜ್ಯಗಳ ವಲಯ ಮಟ್ಟಕ್ಕೆ ಎಂ.ರಾಜಶೇಖರ್ ಆಯ್ಕೆ

ಮಂಡ್ಯ ತಾಲೂಕಿನ ತಗ್ಗಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿ ಎಂ.ರಾಜಶೇಖರ್ ಅವರು ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ‘ಸೋಲಾರ್ ಟ್ರ್ಯಾಕ್ಟರ್ ಮಾದರಿ’ ನಿರ್ಮಿಸಿ ಪ್ರಥಮ ಸ್ಥಾನ ಪಡೆದು ಬಹುಮಾನ ಗಳಿಸಿ ಇದೇ ಜ.27 ರಿಂದ 30 ರವರೆಗೆ ಕೇರಳದ ತ್ರಿಶೂರಿನಲ್ಲಿ ನಡೆಯುವ ದಕ್ಷಿಣ ಭಾರತ ರಾಜ್ಯಗಳ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿ ರಾಜಶೇಖರ್ ಅವರನ್ನು ಡಯಟ್ ಪ್ರಾಂಶುಪಾಲ ವೇದಮೂರ್ತಿ ಅಭಿನಂದಿಸಿ ಮಾತನಾಡಿ, ದೊಡ್ಡ ದೊಡ್ಡ ಕಾನ್ವೆಂಟ್ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶ್ರೀಮಂತಿಕೆ ಇರುವ ಮಕ್ಕಳು ಬೇರೆ ಕಡೆ ಹೋಗಿ ಬಹುಮಾನ ಪಡೆಯುವುದು ದೊಡ್ಡ ವಿಷಯವಲ್ಲ. ಆದರೆ ರಾಜಶೇಖರ್ ಅವರು ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಆರ್ಥಿಕವಾಗಿ ಬಡವರಾಗಿದ್ದು, ತನ್ನದೇ ಆದ ಶೈಲಿಯಲ್ಲಿ ಸೌರ ಪಟ್ಟಿಗಳನ್ನು ಬಳಸಿ ಸೌರಸಕ್ತಿಯನ್ನು ದಿನಪೂರ್ತಿ ಸಂಗ್ರಹಿಸಿ ಬಳಸಿಕೊಳ್ಳಲು ತಯಾರಿಸಿರುವ ಮಾದರಿಗೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದರು.

ಎಂ ರಾಜಶೇಖರ್ ದಕ್ಷಿಣ ಭಾರತದ ವಲಯ ಮಟ್ಟದಲ್ಲಿ ವಿಜ್ಞಾನ ಪ್ರದರ್ಶನಕ್ಕೆ ಆಯ್ಕೆ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಯಟ್ ಉಪನ್ಯಾಸಕ ಡಾ.ನಂದೀಶ್, ಮುಖ್ಯ ಶಿಕ್ಷಕ ರಾಜು, ಶಿಕ್ಷಕಿ ಮಂಜುಳಾ ಸೇರಿದಂತೆ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ