Sunday, November 22, 2026

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಲು ಮನವಿ

ಮೈಸೂರು ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ರೈತರು ತಮ್ಮ ಹಂತದಲ್ಲೇ ವ್ಯವಸ್ಥೆ ಮಾಡಿಕೊಂಡು ಕಬ್ಬು ಕಟಾವು ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವಂತೆ ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ವ್ಯವಸ್ಥಾಪಕ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಪೂರೈಸಿದ ಕಬ್ಬಿಗೆ ಕಾರ್ಖಾನೆಯಿಂದ ಸಮಯಕ್ಕೆ ಸರಿಯಾಗಿ ಎಲ್ಲಾ ಬಿಲ್ ಸಂದಾಯ ಮಾಡಲಾಗಿದೆ. ರೈತ ಬಾಂಧವರು ಇನ್ನೂ ಹೆಚ್ಚಿಗೆ ಕಬ್ಬನ್ನು ಪೂರೈಕೆ ಮಾಡಿದ್ದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳ ಸಾಮರ್ಥ್ಯವನ್ನು ಪರೀಕ್ಷಿಸಿ, ಇನ್ನೂ ಏನಾದರೂ ಲೋಪದೋಷಗಳು ಇದ್ದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ಹಂಗಾಮು 2023-24ನೇ ಸಾಲಿನಲ್ಲಿ ದಿನಾಲು 3500-4000 ಮೆ.ಟನ್ ಕಬ್ಬು ನುರಿಸಲು ಸಹಕಾರಿಯಾಗುತ್ತದೆ. ಈ ಕಾರ್ಖಾನೆಯನ್ನು ಸದೃಢಗೊಳಿಸಿ ಮುಂದಿನ ಹಂಗಾಮಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕಬ್ಬು ನುರಿಸುವ ಸಲುವಾಗಿ ರೈತರ ಸಹಾಯ ಸಹಕಾರದ ಅಗತ್ಯವಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕರು ಕೋರಿದ್ದಾರೆ.

ಮಂಡ್ಯ ಜಿಲ್ಲೆಯ ರೈತರ ಹಾಗೂ ಜನಪ್ರತಿನಿಧಿಗಳ ಹೋರಾಟದ ಫಲದಿಂದ ಕರ್ನಾಟಕ ಸರ್ಕಾರದ ಸಮಯೋಜಿತ ನಿರ್ಧಾರದಂತೆ ಹಾಗೂ ಮಂಡ್ಯ ಜಿಲ್ಲೆ ರೈತರ ಹಿತದೃಷ್ಟಿಯಿಂದ ಮೈಸೂರು ಸಕ್ಕರೆ ಕಾರ್ಖಾನೆಯು 2022-23ನೇ ಸಾಲಿನ ಕಬ್ಬು ನುರಿಸುವುದನ್ನು ಸೆಪ್ಪೆಂಬರ್-2022 ರಂದು ಪ್ರಾರಂಭಿಸಿತು.

ಕಾರ್ಖಾನೆಯನ್ನು ಎಲ್ಲಾ ರೀತಿಯಿಂದಲೂ ದುರಸ್ಥಿಗೊಳಿಸಿ ಸದ್ಯ ದಿನ ಒಂದಕ್ಕೆ 2500 ರಿಂದ 3000 ಮೆ.ಟನ್ ಕಬ್ಬು ಪೂರೈಕೆಯಾದರೂ ಕೂಡ ಯಾವುದೇ ತೊಂದರೆ ಇಲ್ಲದೆ ಕಬ್ಬು ನುರಿಸುವಷ್ಟು ಕಾರ್ಖಾನೆಯನ್ನು ಸುಸಜ್ಜಿತಗೊಳಿಸಲಾಗಿದೆ. ಆದರೆ ಕಬ್ಬಿನ ಪೂರೈಕೆಯಲ್ಲಿ ಕೊರತೆಯಾಗಿದ್ದು, ನಿಗದಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ