Saturday, November 21, 2026

ಪ್ರಾಯೋಗಿಕ ಆವೃತ್ತಿ

ಎಲ್ಲರನ್ನೂ ಜ್ಞಾನವಂತರಾಗಿಸುವುದು ಕಲಿಕಾ ಹಬ್ಬದ ಉದ್ದೇಶ

ಮಕ್ಕಳು ಸಂತೋಷದಾಯಕ ಕಲಿಕೆಯನ್ನು ಕಲಿತು ಅವರ ಸ್ನೇಹಿತರಿಗೂ ಕಲಿಸುತ್ತಾ ಎಲ್ಲರನ್ನೂ ಜ್ಞಾನವಂತ ರಾಗಿಸುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಎಸ್.ಪಿ ನಾಗರಾಜು ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಹಿಟ್ಟನಹಳ್ಳಿ ಕೊಪ್ಪಲು ಕ್ಲಸ್ಟರ್ ಹಂತದ ಮಕ್ಕಳ ಕಲಿಕಾ ಹಬ್ಬದ ಕಾರ‍್ಯಕ್ರಮವನ್ನು ಉದ್ದಾಟಿಸಿ ಮಾತನಾಡುದ ಅವರು, ಮಕ್ಕಳು ಶಾಲೆಗಳಲ್ಲಿ ರ‍್ವತೋಮುಖವಾಗಿ ಕಲಿತು ಜ್ಞಾನವಂತರಾಗಿಸಲು ಇಂಥ ಚಟುವಟಿಕೆಗಳು ಸಹಕಾರಿ ಯಾಗಿವೆ. ಪ್ರಸ್ತುತ ಸಾಲಿನಲ್ಲಿ ಸರ್ಕಾರ ಕಲಿಕಾ ಹಬ್ಬವನ್ನು ಆಚರಿಸಲುಅನುವು ಮಾಡಿಕೊಟ್ಟಿದ್ದಕೆ ಶಿಕ್ಷಣ ಇಲಾಖೆಗೆ ದನ್ಯವಾದಗಳನ್ನು ಹೇಳುತ್ತೇನೆ ಮತ್ತು ಕಲಿಲಾ ಚೇತರಿಕೆ ವರ್ಷದಲ್ಲಿ ಕಲಿತ ಅಂಶಗಳನ್ನು ಪ್ರಸತುತ ಪಡಿಸಲು ಈ ಕಲಿಕಾ ಹಬ್ಬವು ವೇದಿಕೆಯಾಗಿದೆ ಎಂದರು.

ಕಲಿಕಾ ಹಬ್ಬದ ಅಂಗವಾಗಿ ಪೂರ್ಣಕುಂಭ, ಪೂಜಾಕುಣಿತ, ಪಟ್ಟದಕುಣಿತ, ವೀರಗಾಸೆಕುಣಿತ ಹಾಗೂ ಸಾಂಸ್ಕ಼ತಿಕ ಕಾರ್ಯಕ್ರಮಗಳನ್ನು ಗ್ರಾದ ಪ್ರಮುಖ ಬೀದಿಗಳಲ್ಲಿ ಏರ್ಪಡಿಸಲಾಯಿತು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್ ವಹಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ ಸಮ್ವನಯ ಅದಿಕಾರಿ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷ, ಪದಾಧಿಕಾರಿಗಳು, ನೌಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಅಕ್ಷರ ದಾಸೋಹ ಸಹಾಯಕ ಜಯಪ್ರಕ್ರಾಶ್, ಶಿಕ್ಷಕ ಸಂಘಟನೆಯ ದಾಸೇಗೌಡ, ಸಿದ್ದರಾಜು ಸೇರಿದಂತೆ ಶಿಕ್ಷಕರು ಹಾಗೂ ವಿಥ್ಯಾರ್ಥಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ