ಸವಿತಾ ಸಮಾಜದವರು ಕ್ಷೌರಿಕ ಅಥವಾ ವಾದ್ಯ ನುಡಿಸುವ ವೃತ್ತಿಯನ್ನಾದರೂ ಮಾಡಿ, ಆದರೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ಮರೆಯಬೇಡಿ. ಶಿಕ್ಷಣ ಬದುಕಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಪಿ.ರಾಮಮೂರ್ತಿ ಹೇಳಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಸವಿತಾ ಮಹರ್ಷಿ ಜಯಂತಿಯನ್ನು ಮಂಡ್ಯ ಕಲಾಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸವಿತಾ ಸಮಾಜದಲ್ಲಿ ಜನಿಸಿದವರು ಕೇವಲ ಕ್ಷೌರಿಕ ವೃತ್ತಿಯಲ್ಲಿ ತೊಡಗದೇ ವಿದ್ಯವಂತರಾಗಿ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿರುವ ಮೌಢ್ಯತೆಗಳನ್ನು ತೊಡೆದು ಹಾಕಲು ಸವಿತಾ ಮಹರ್ಷಿಯವರು ಶ್ರಮಿಸಿದರು. ಇಂಗ್ಲಿಷ್ ಮೆಡಿಷನ್ ಬರುವುದಕ್ಕೂ ಮುನ್ನ ಸವಿತಾ ಸಮಾಜದವರು ವೈದ್ಯ ವೃತ್ತಿಯನ್ನು ಮಾಡುತ್ತಿದ್ದವರು. ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಜೀವನ ನಡೆಸಬೇಕು. ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್ ಉದಯ್ ಕುಮಾರ್, ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ರಾಜಶೇಖರ, ಕಾರ್ಯದರ್ಶಿ ಪುಟ್ಟರಾಜು, ಬಸವರಾಜು, ಚಿಕ್ಕಬೋರಪ್ಪ, ಮಂಡ್ಯ ಮೂರ್ತಿ, ಬಾಲು, ಜಗದೀಶ್, ಮುಖಂಡರಾದ ರಾಮಮೂರ್ತಿ, ಎಲ್.ಸಂದೇಶ್ ಸೇರಿದಂತೆ ಇನ್ನಿತರರಿದ್ದರು.




