ಹೆಣ್ಣು ಸೀತೆಯೇ ಆಗಬೇಕು ಯಾಕೆ…? ಅವಳು ಬುದ್ದಳಾಗಬಹುದಲ್ವೇ…!
ಉತ್ತರ…
ಹೆಣ್ಣು ಬುದ್ದನಂತೆ ಮಲಗಿದ ಗಂಡ ಮತ್ತು ಮಕ್ಕಳನ್ನು ತೊರೆದು ಹೋದಳೆಂದರೆ…
ಈ ಕೊಳಕು ಸಮಾಜ ಮೊದಲೇ ಹೇಳಿ ಬಿಡುತ್ತದೆ. ಅವಳೇ ಯಾವನೋ ಪ್ರೇಮಿಯ ಜೊತೆಗೆ ಓಡಿ ಹೋಗಿರಬೇಕು ಎಂದು…
ಸಮಾಜ ಎಂದೂ ಕೂಡ ತಿಳಿಯಲು ಯತ್ನಿಸುವುದಿಲ್ಲ… ಅವಳೂ ಕೂಡ ಬುದ್ದನಂತೆ ತನ್ನ ತಾನು ಕಂಡುಕೊಳ್ಳಲು ಹೋಗಿಹಳೆಂದು.!
ಈ ಸಮಾಜದಲ್ಲಿ ಹೆಣ್ಣಿನ ಕುರಿತಂತೆ ಆಲೋಚನೆಗಳೆಲ್ಲಾ ಕೆಟ್ಟದೇ ಆಗಿರುತ್ತದೆ.
ಬುದ್ದ ಕಾಡಿನಿಂದ ಬಂದ ಕೂಡಲೇ ಮಹಾತ್ಮನಾಗಿ ಸಂಭೋದಿತನಾದ. ಆದರೆ, ಸೀತೆ ಕಳಂಕಿತಳಾದಳು. ಜೊತೆಗೆ ನಾನು ಪವಿತ್ರಳೆಂದು ಸಾಬೀತು ಪಡಿಸಲು ಅಗ್ನಿ ಪರೀಕ್ಷೆ ಎದುರಿಸಬೇಕಾಯಿತು.
ಒಂದೆಡೆ ಸಮಾಜ ಮತ್ತೀ ಜನರು ಜಾತಿ ಭೇದದಲ್ಲಿ ಸಿಲುಕಿದ್ದಾರೆ. ಆದರೆ,
ಹೆಣ್ಣು ಗಂಡೆಂಬ ಭೇದಭಾವದ ವಿಚಾರದಲ್ಲಿ ಮೌನವಾಗಿಯೇ ಉಳಿದಿದ್ದಾರೆ
ಮೂಲ: ಆಭಾ ಉಪಾಧ್ಯಾಯ್
ಅನು: ಮಂಜುಳ ಕಿರುಗಾವಲು
Post credits: ಸಾಕಿ