ಏರ್ ಶೋ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಳೆದ ರಾತ್ರಿ ವಿಶೇಷ ಔತಣಕೂಟದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನ ರಾಜಭವನದಲ್ಲಿ ನಡೆದ ಮೋದಿ ಡಿನ್ನರ್‌ಗೆ ರಾಜ್ಯದ ಕೆಲವೇ ಸೆಲಬ್ರಿಟಿಗಳಿಗೆ ಆಹ್ವಾನ ನೀಡಲಾಗಿತ್ತು. ಈ ವಿಶೇಷ ಔತಣಕೂಟದ ಮತ್ತಷ್ಟು ಅಪರೂಪದ ಫೋಟೋಗಳು ಈಗ ಬಿಡುಗಡೆಯಾಗಿದೆ.
ಔತಣಕೂಟದ ಬಳಿಕ ಪ್ರಧಾನಿ ಮೋದಿ ಜೊತೆ ಸೆಲಬ್ರಿಟಿಗಳ ಫೋಟೋ ಸೆಷನ್ ಕೂಡ ನಡೆದಿದೆ. ಮೊದಲಿಗೆ ಮೋದಿ ಜೊತೆ ಎಲ್ಲರೂ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್, ಪ್ರಧಾನಿ ಪಕ್ಕದಲ್ಲಿ ನಿಂತು ಪೋಟೋಗೆ ಪೋಸ್ ಕೊಟ್ಟಿದ್ದಾರೆ.
ರಾಜಭವನದಲ್ಲಿ ನಡೆದ ಔತಣಕೂಟದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಭಾಗಿಯಾಗಿದ್ದರು. ಅವರೂ ಕೂಡ ಪ್ರಧಾನಿ ಮೋದಿ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಇನ್ನು, ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ, ಕೆಜಿಎಫ್ ಚಿತ್ರದ ನಿರ್ಮಾಪಕ, ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆಯ ವಿಜಯ್ ಕಿರಂಗದೂರು, ರೇಡಿಯೋ ಜಾಕಿ ಶ್ರದ್ಧಾ ಜೈನ್ ಅವರು ಪ್ರಧಾನಿ ಮೋದಿ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಶ್ರದ್ಧಾ ಮೋದಿ ಜೊತೆ ತೆಗೆಸಿಕೊಂಡ ಅಪರೂಪದ ಫೋಟೋಗಳನ್ನ ತನ್ನ ಟ್ವಿಟರ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.




