ರಾಪ್ ಸಾಂಗ್ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ ಮಂಡ್ಯ -ಮದ್ದೂರು ತಾಲ್ಲೂಕು, ಕೊಪ್ಪ ಹೋಬಳಿಯ ಹರಳೆಕೆರೆ ಗ್ರಾಮದ ಹೆಚ್‌ಪಿ ಅವರು ನಿರ್ದೇಶಿಸಿ ನಟಿಸಿ ರಾಪ್ ಹಾಡಿರುವ “ಕನ್ನಡಿ” ಎಂಬ ರಾಪ್ ಸಾಂಗ್ ಟೈಟಲ್ ಮತ್ತು ಆಫೀಷಿಯಲ್ ಪೋಸ್ಟರ್ ಬಿಡುಗಡೆಯನ್ನು ಮಂಡ್ಯದ ಪತ್ರಿಕಾಗೋಷ್ಠಿಯಲ್ಲಿ ಮಾಡಿದರು.
ರಾಪರ್ ಆದ ಹೆಚ್.ಪಿ ಯು ಟೈಟಲ್ ಮತ್ತು ಪೋಸ್ಟರ್‌ನ್ನು ಬಿಡುಗಡೆ ಮಾಡಿದ್ದರು, ನಂತರ ಮಾತಾನಾಡಿದ ಹೆಚ್‌ಪಿ ಈ ಸಾಂಗ್ ನಿರ್ಮಾಣವನ್ನು ಪಬ್ಲಿಕ್ ಪ್ರೋಡೆಕ್ಷನ್ ಎಂಬ ಸಂಸ್ಥೆಯು ವೆಚ್ಚ ಭರಿಸಿದೆ ಎಂದು ತಿಳಿಸಿದರು.

ತಾವು ಕಳೆದ 12 ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಶ್ರೀ ಸರ್ವೇಜನ ಆರ್ಟ್ ಮತ್ತು ಕಲ್ಬರಲ್ ಟ್ರಸ್ಟ್ (ರಿ) ಸಂಸ್ಥೆಯು ಗುರುತಿಸಿ “ಈ ನಾಡ ರತ್ನ” ಎಂಬ ರಾಷ್ಟ್ರ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ ಎಂದು ತಿಳಿಸಿದರು.
ಕನ್ನಡಿ ರಾಂಪ್ ಸಾಂಗ್‌ಗೆ ಸ್ವತಃ ಹೆಚ್ ಪಿ ಯವರೇ ಸಾಹಿತ್ಯ ಬರೆದಿದ್ದು, ಈ ಆಲೋಚನೆ ಲಾಕ್ ಡೌನ್ ಸಮಯದಲ್ಲಿ ಬಂದಿದ್ದು ಎಂದು ಹೇಳಿದ್ದರು. ಕನ್ನಡಿ ರಾಂಪ್ ಸಾಂಗ್‌ನ್ನು ಶೀರ್ಘವಾಗಿ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.




