Friday, November 20, 2026

ಪ್ರಾಯೋಗಿಕ ಆವೃತ್ತಿ

ಎಚ್ಚೆತ್ತ ಮಂಡ್ಯ ನಗರಸಭೆ:ರಸ್ತೆಯಲ್ಲಿರುವ ಮರಗಳ ರೆಂಬೆ-ಕೊಂಬೆ ತೆರವು

ಮಂಡ್ಯ ನಗರಸಭೆಯ ಪೌರಕಾರ್ಮಿಕನೊಬ್ಬನ ಮೇಲೆ ಒಣಗಿದ ಮರವೊಂದು ಬಿದ್ದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆಯಿಂದ ನಗರಸಭೆ ಕೊನೆಗೂ ಎಚ್ಚೆತ್ತಿದೆ.

ಕಳೆದ ವಾರ ಮಂಡ್ಯ ನಗರಸಭೆಯಲ್ಲಿ ನೇರ ನೇಮಕಾತಿಯಡಿ ಕೆಲಸ ನಿರ್ವಹಿಸುತ್ತಿದ್ದ ಉದಯ್ ಕುಮಾರ್ ಎಂಬ ಯುವಕ ತನ್ನ ಪತ್ನಿ, ಮಕ್ಕಳೊಂದಿಗೆ ತಾವರೆಗೆರೆ ಬಡಾವಣೆಯ ಚಲುವಯ್ಯ ಪಾರ್ಕ್ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಒಣಗಿದ ಮರವೊಂದು ಉದಯ್ ಕುಮಾರ್ ತಲೆ ಮೇಲೆ ಬಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.ಉದಯ್ ಕುಮಾರ್ ಸಾವಿಗೆ ಕಂಬನಿ‌ ಮಿಡಿದಿದ್ದ ಜನರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು.

nudikarnataka.com nagarasabhe

ಇದರಿಂದ ಎಚ್ಚೆತ್ತ ನಗರಸಭೆ ಮಂಡ್ಯ ನಗರದ ಪ್ರಮುಖ ರಸ್ತೆಗಳಾದ 100 ಅಡಿ ರಸ್ತೆ, ಪೇಟೆ ಬೀದಿ,ಮಹಾವೀರ ಸರ್ಕಲ್ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಒಣಗಿದ್ದ ಮರ ಹಾಗೂ ರಸ್ತೆಗೆ ಬಾಗಿದ್ದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಜನರು ಭಯ,ಆತಂಕವಿಲ್ಲದೆ ಓಡಾಡಲು ಅನುಕೂಲ‌ ಕಲ್ಪಿಸುತ್ತಿದ್ದಾರೆ.ಅದೇ ರೀತಿ ನಗರದ ಎಲ್ಲಾ ಬಡಾವಣೆಗಳಲ್ಲಿರುವ ಅಪಾಯಕಾರಿ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿ ಜನರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲ ಕಲ್ಪಿಸುತ್ತಿರುವುದು ಉತ್ತಮ ಕೆಲಸ.ಹಾಗೆಯೇ ಅಶೋಕ ನಗರ,ವಿದ್ಯಾನಗರ,ಸುಭಾಷ್ ನಗರ ಸೇರಿದಂತೆ ನಗರದ ಹಲವು ಉದ್ಯಾನವನಗಳಲ್ಲಿ ಪ್ರತಿದಿನ ಬೆಳಿಗ್ಗೆ, ಸಂಜೆ ಸಾರ್ವಜನಿಕರು ವಾಕಿಂಗ್ ಮಾಡುತ್ತಾರೆ‌.ಉದ್ಯಾನವನಗಳು ಸೇರಿದಂತೆ ಎಲ್ಲಾ ಬಡಾವಣೆಗಳಲ್ಲಿರುವ ಒಣಗಿರುವ ಮರ ಹಾಗೂ ಬಾಗಿರುವ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸಮಾಜ ಸೇವಕ ಬಿ.ಆರ್‌.ಸುರೇಶ್ ತಿಳಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲ.ಪ್ರತಿ ಬಡಾವಣೆಯ ಪ್ರತಿ ಬೀದಿಗಳಲ್ಲಿ ನಗರಸಭೆ ಸಿಬ್ಬಂದಿ ಸರ್ವೆ ಮಾಡಬೇಕು.ಹಲವು ಸ್ಲಂಗಳಲ್ಲಿ ಬೃಹತ್ ಗಾತ್ರದ ಮರಗಳಿದ್ದು, ಅಪಾಯಕ್ಕೆ ಆಹ್ವಾನ ನೀಡುವ ಎಲ್ಲಾ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸುವ ಮೂಲಕ ಜನರನ್ನು ಪ್ರಾಣಾಪಾಯದಿಂದ ಕಾಪಾಡಬೇಕು ಎಂದು ಕುವೆಂಪು ನಗರ ನಿವಾಸಿ ಹೇಮಂತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ನುಡಿ ಕರ್ನಾಟಕ. ಕಾಮ್ ಜೊತೆ ಮಾತನಾಡಿ,

nudikarnataka.com nagarasabhe

ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಗಳಲ್ಲಿರುವ ಒಣಗಿದ ಮರ, ವಾಹನ ಸವಾರರಿಗೆ ತೊಡಕಾಗಿರುವ ಹಾಗೂ ಬೀದಿದೀಪಗಳಿಗೆ ಅಡಚಣೆ ಉಂಟು ಮಾಡುವ ಮರಗಳ ರೆಂಬೆ ಕೊಂಬೆ ಕಡಿಯಲು ಮೂರು ತಿಂಗಳ ಹಿಂದೆಯೇ ಟೆಂಡರ್ ಕರೆಯಲಾಗಿತ್ತು.ಆದರೆ ರೆಂಬೆ-ಕೊಂಬೆ ತೆರವುಗೊಳಿಸುವಷ್ಟರಲ್ಲಿಯೇ ನಗರಸಭೆಯ ಪೌರಕಾರ್ಮಿಕನೊಬ್ಬನ ಮೇಲೆ ಮರದ ರೆಂಬೆ ಬಿದ್ದು ಸಾವನ್ನಪ್ಪಬೇಕಾಯಿತು.ಈ ಹಿನ್ನಲೆಯಲ್ಲಿ ತಕ್ಷಣವೇ ನಗರಸಭೆ ವತಿಯಿಂದ ನಗರದೆಲ್ಲೆಡೆ ಅಪಾಯಕಾರಿ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಿ ಸಾರ್ವಜನಿಕರು ಭಯ,ಆತಂಕವಿಲ್ಲದೆ ಮುಕ್ತವಾಗಿ ಓಡಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ