Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದ ವಿಸಿ ಫಾರಂನಲ್ಲಿ ಬೆಲ್ಲ ತಯಾರಿಕಾ ಘಟಕ ಉದ್ಘಾಟನೆ

ಮಂಡ್ಯ ತಾಲೂಕಿನ ವಿಸಿ ಫಾರಂನ ಬೆಲ್ಲದ ಪಾರ್ಕಿನ ಆವರಣದಲ್ಲಿ ಕೃಷಿ ವಿವಿ ಬೆಂಗಳೂರು ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರ, ವಿಸಿ ಫಾರಂ ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳ ಕ್ರಮಬದ್ಧ ಗೊಳಿಸುವ ಯೋಜನೆ, ಆಹಾರ ಸಂಸ್ಕರಣಾ ಮಂತ್ರಾಲಯದ ಅಡಿಯಲ್ಲಿ ಮಂಗಳವಾರ ನೂತನ ಬೆಲ್ಲ ತಯಾರಿಕಾ ಕೇಂದ್ರವನ್ನು ಬೆಂಗಳೂರಿನ ಕೃಷಿ ವಿವಿ ಕುಲಪತಿಗಳಾದ ಡಾ.ಎಸ್‌.ವಿ.ಸುರೇಶ್‌ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯ ಕೃಷಿ ವಿವಿಯಿಂದ ಇಂದು ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದ ಅಡಿಯಲ್ಲಿ ಸಾವಯವ ಬೆಲ್ಲ ತಯಾರಿಕೆ ಘಟಕವನ್ನು ಉದ್ಘಾಟನೆ ಮಾಡಲಾಗಿದೆ. ಖಾಸಗಿ ಅವರ ಸಹಭಾಗಿತ್ವದಲ್ಲಿ ಈ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಇಂದಿನಿಂದ ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಕೆ ಮಾಡಲಾಗುತ್ತದೆ ಎಂದು ಹೇಳಿದರು.

nudikarnataka.com

ಸಾವಯವ ಬೆಲ್ಲಕ್ಕೆ ಎಲ್ಲಾ ಕಡೆಗಳಲ್ಲಿಯೂ ಹೆಚ್ಚಿನ ಬೇಡಿಕೆ ಇದೆ. ಮಂಡ್ಯದ ವಿಸಿ ಫಾರಂನಲ್ಲಿ ಹಾಗೂ ಜಿಲ್ಲೆಯಲ್ಲಿ ಬೆಳೆಯುವ ಕಬ್ಬನ್ನು ಉತ್ತಮ ಉತ್ಪನ್ನವಾಗಿ ಮಾಡಲು ಸಹಕಾರಿಯಾಗಿದೆ. ಹಾಗಾಗಿ ಈ ಘಟಕದಿಂದ ತಯಾರಿಸುವ ಸಾವಯವ ಬೆಲ್ಲದಿಂದ ಈ ಭಾಗದ ಸುತ್ತಮುತ್ತಲಿನ ರೈತರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ಮೂಲಕ ಉತ್ತಮ ಗುಣಮಟ್ಟದ ಉತ್ಪನ್ನವನ್ನು ತಯಾರಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂಬ ಕೃಷಿ ವಿವಿ ಆಶಯ ಈಡೇರಿದೆ. ಮುಂದಿನ ದಿನಗಳಲ್ಲಿ ಈ ಘಟಕವು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ರೈತ ಸಮುದಾಯಕ್ಕೆ ವರದಾನವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಸಿ ಫಾರಂನ ಕೃಷಿ ವಿವಿ ನಿಲಯದ ಡೀನ್‌ ಡಾ.ಎಸ್‌.ಪ್ರಕಾಶ್‌, ಹಾಸನ ಕೃಷಿ ವಿವಿ ನಿಲಯದ ಡೀನ್‌ ಡಾ.ಎಸ್‌.ಎನ್‌.ವಾಸುದೇವನ್‌, ವಲಯ ಕೃಷಿ ಸಂಶೋಧನಾ ನಿರ್ದೇಶಕ ಡಾ.ಶಿವಕುಮಾರ್‌, ಬೆಲ್ಲದ ಪಾರ್ಕ್‌ನ ಮುಖ್ಯಸ್ಥ ಹಾಗೂ ಕಬ್ಬು ಬೆಳೆ ಬೇಸಾಯದ ತಜ್ಞ ಡಾ.ಕೆ.ವಿ.ಕೇಶವಯ್ಯ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ