ಮಹಮ್ಮದ್ ಜಪುಲ್ಲಾಖಾನ್ ಮಂಡ್ಯದಲ್ಲಿ ಚಿರಪರಿಚಿತರು ಇವರು ಸಾಮಾನ್ಯ ನಡವಳಿಕೆ ಎಲ್ಲರೂ ಇಷ್ಟಪಡುವಂತದ್ದು ಬಹುಕೋಟಿ ಒಡೆಯನಾಗಿದ್ದರೂ ಹಮ್ಮು ಬಿಮ್ಮು ಇಲ್ಲದೆ, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಪ್ರೀತಿಸುವವರಿಗೆ ಗೌರವ ಸೂಚಿಸಿ ನಡೆಯುವುದು ಅವರ ವಿಶೇಷತೆ ಮಂಡ್ಯದ ಅಭಿಮಾನಿಗಳಾದ ಜಿ.ಎಂ. ಚಂದು ಮತ್ತು ಸುಜಿತ್ ಸೇರಿ ಹಲವರು ಅರಕೇಶ್ವರ ದೇವಾಲಯದ ಪೂಜೆಗೆ ಬರುವಂತೆ ಕೇಳಿಕೊಳ್ಳುತ್ತಾರೆ, ಅಭಿಮಾನದ ಆಹ್ವಾನಕ್ಕೇ ಇಲ್ಲವೆನ್ನದೆ ಆಗಮಿಸುತ್ತಾರೆ.
ಬಂದ ನಂತರ ಅವರಿಗೆ ಶರ್ಟ್, ಪಂಚೆ, ಶಲ್ಯ ಹಾಕಿಕೊಂಡು ದೇವಸ್ಥಾನಕ್ಕೆ ಬರುವಂತೆ ಪ್ರೀತಿಯಿಂದ ಕೇಳಿಕೊಳ್ಳುತ್ತಾರೆ. ಇದಕ್ಕೆ ತಿರಸ್ಕರಿಸದ ಮಹಮದ್ ಜಫ್ರುಲ್ಲಾ ಖಾನ್ ಅವರು ತಾವು ಹಾಕಿದ್ದ ಸೂಟ್, ಟೈ ಪ್ಯಾಂಟ್ ತೆಗೆದು, ಸಾಂಪ್ರದಾಯಿಕ ಉಡುಗೆ ಪಂಚೆ ಶರ್ಟ್ ಶಲ್ಯ ತೊಡುತ್ತಾರೆ. ಬಳಿಕ ತಮ್ಮ ನೂರಾರು ಅಭಿಮಾನಿಗಳ ಜೊತೆ ಅರ್ಕೇಶ್ವರ ದೇವಾಲಯಕ್ಕೆ ತೆರಳಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ, ಪೂಜೆ ಸಲ್ಲಿಸಿ, ಒಂದು ತಾಸಿಗೂ ಹೆಚ್ಚು ಕಾಲ ಸಮಯ ಕಳೆಯುತ್ತಾರೆ, ಇದು ನೆರೆದಿದ್ದ ಜನರಿಗೆ, ಅಭಿಮಾನಿಗಳಿಗೆ ಸಂತಸ ಉಂಟು ಮಾಡುತ್ತದೆ, ಒಬ್ಬ ಮುಸ್ಲಿಮ್ ನಾಗಿ ಸರ್ವ ಧರ್ಮ ಗೌರವಿಸುವ ಗುಣ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ.
ಮಂಡ್ಯದಲ್ಲಿ ಈ ಕಾರಣಕ್ಕೆ ಜಫ್ರುಲ್ಲಾ ಖಾನ್ ಅವರಿಗೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಬಳಗವಿದೆ. ಅವರಿಗೆ ಮುಸ್ಲಿಮ್ ರ ಜೊತೆಗೆ ಹಿಂದುಗಳು ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮದ ಅಭಿಮಾನಿಗಳಿರುವುದು ವಿಶೇಷ.

ಮಂಡ್ಯದಲ್ಲಿ ಆ ಕಾರಣಕ್ಕೆ ಹಿಂದೂ – ಮುಸ್ಲಿಂ ರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲೇ ಕೋಮು ಗಲಭೆ ನಡೆದರೂ ಮಂಡ್ಯದಲ್ಲಿ ಅದರ ಪರಿಣಾಮ ಕಡಿಮೆ ಏಕೆಂದರೆ ಜಫ್ರುಲ್ಲಾ ಅವರು ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದು ಧರ್ಮಗಳ ನಡುವೆ ಮನಸ್ತಾಪ ಉಂಟಾದಾಗ ಕರೆದು ಮಾತುಕತೆ ನಡೆಸಿ, ಬುದ್ಧಿವಾದ ಹೇಳಿ ಕಳಿಸುತ್ತಾರೆ.
ಧಾರ್ಮಿಕ ಕಾರ್ಯಗಳಿಗೆ ಮುಂದು ಮಂಡ್ಯದಲ್ಲಿ ಹಲವು ದೇವಾಲಯಗಳು ಧನ ಸಹಾಯ ಮಾಡಿದ್ದಾರೆ ಕೋಡಿಹಳ್ಳಿ ಫಾರಂನಲ್ಲಿ ಪಟ್ಟಲದಮ್ಮ ದೇವಾಲಯವನ್ನು ತಮ್ಮ ಸಂಪೂರ್ಣ ಖರ್ಚಿನಿಂದ ನಿರ್ಮಾಣ ಮಾಡಿದ್ದಾರೆ. ಸಾತನೂರು ಗ್ರಾಮದಲ್ಲಿ ಮಸಣಮ್ಮ ದೇವಾಲಯಕ್ಕೆ ಜಾಗ ದಾನವಾಗಿ ನೀಡಿದ್ದಾರೆ ಅಲ್ಲದೆ, ಯಾವುದೇ ದೇವಾಲಯ ಇರಲಿ ಜೀರ್ಣೋದ್ಧಾರ, ನಿರ್ಮಾಣ, ಅನ್ನದಾನ ಸೇರಿದಂತೆ ಹಲವು ಕಾರ್ಯಗಳಿಗೆ ತನು ಮನ ಸಮರ್ಪಿಸಿದ್ದಾರೆ




