ವರದಿ : ಅನುಪಮಾ ಸತೀಶ್
ನನ್ನ ಕಳೆದ 2 ವರ್ಷಗಳ ಸೇವೆ ಈಗಾಗಲೇ ಜನರಿಗೆ ಮುಟ್ಟಿದೆ ಅಂದುಕೊಂಡಿದ್ದೇನೆ. ರೈತರ ಹಳ್ಳಿಯ ನಿರುದ್ಯೋಗಿ ಮಕ್ಕಳಿಗೆ ಉದ್ಯೋಗ ಸಿಗಲಿ, ಗ್ರಾಮಗಳ ಅಭಿವೃದ್ದಿಗೆ ಏನಾದರೂ ಕೊಡುಗೆ ನೀಡಬೇಕೆಂದು ಬಂದಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಕದಲೂರು ಉದಯ್ ತಿಳಿಸಿದರು.
ಮದ್ದೂರು ತಾಲ್ಲೂಕು ಅಂಬರಹಳ್ಳಿ ಗ್ರಾಮದಲ್ಲಿ ಕದಲೂರು ಉದಯ್ ಅಭಿಮಾನಿಗಳ ಬಳಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಸ್ವಂತ ಹಣದಿಂದ 2 ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ನನ್ನ ಕೆಲಸವನ್ನು ಗುರುತಿಸಿ ಅಭಿಮಾನಿಗಳ ಬಳಗವನ್ನು ತೆರೆಯುತ್ತಿರುವುದಕ್ಕೆ ನಾನು ಋಣಿಯಾಗಿರುತ್ತೇನೆ ಎಂದರು.
ನನಗೆ ರಾಜಕೀಯಕ್ಕೆ ಬರುವುದು, ಯಾವುದೇ ಪಕ್ಷಕ್ಕೆ ಸೇರುವುದು ಆಸೆ ಇರಲಿಲ್ಲ. ಕ್ಷೇತ್ರದ ಜನರು ನನ್ನ ಸೇವೆಯನ್ನು ಗುರುತಿಸಿ ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಮತ್ತಷ್ಟು ಕೆಲಸ ಮಾಡಬಹುದು ಎಂದು ಒತ್ತಾಯ ಮಾಡಿದ ಮೇರೆಗೆ ನಾನು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ ಎಂದು ನುಡಿದರು.
ಇದೇ ವೇಳೇ ಮಹೇಶ್, ನಾಗೇಶ್, ಆತ್ಮಾನಂದ, ಎ.ಜಿ.ಕೃಷ್ಣ, ಲೋಕೇಶ್, ಹರೀಶ್, ಯೋಗಾನಂದ, ಮಲ್ಲನದೊಡ್ಡಿ ಯೋಗ, ಅರುಣ್, ಸಚಿನ್, ಸತೀಶ್, ಮೋಹನ್ ಕುಮಾರ್, ಗ್ರಾ.ಪಂ ಸದಸ್ಯರು, ಊರಿನ ಮುಖಂಡರು ಉಪಸ್ಥಿತರಿದ್ದರು.




