ಗುತ್ತಿಗೆದಾರರು 40% ಕಮಿಷನ್ ಬಗ್ಗೆ ಆರೋಪಿಸಿ ಒಂದು ವರ್ಷ ಕಳೆದಿದ್ದರೂ ನಿರ್ಲಜ್ಜ ಬಿಜೆಪಿ ಸರ್ಕಾರವು ರಾಜ್ಯದಾದ್ಯಂತ ಗುತ್ತಿಗೆದಾರರ 22 ಸಾವಿರ ಕೋಟಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ 2-3 ವರ್ಷಗಳಿಂದ ಬಾಕಿ ಬಿಲ್ ಪಾವತಿಸದಿರುವ ಸರ್ಕಾರದ ನಡೆಯಿಂದ ಬೇಸತ್ತು ಮಂಡ್ಯದ ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂಡ್ಯ ಗುತ್ತಿಗೆದಾರರಿಗೆ ಸರ್ಕಾರವು ಸುಮಾರು 250 ಕೋಟಿ ರೂ. ಬಾಕಿ ಬಿಲ್ ಉಳಿಸಿಕೊಂಡಿದೆ.
ಸಿಎಂ ಬೊಮ್ಮಾಯಿ ಅವರೇ ಬಿಲ್ ಬಾಕಿ ಬಿಡುಗಡೆ ಮಾಡಲು ಪೇ ಸಿಎಂ ಮಾಡ್ಬೇಕಾ, ಚೆಕ್ ಕೊಡಬೇಕಾ, RTGS ಮಾಡ್ಬೇಕಾ? ಅಥವಾ ವಿಷ ಕುಡಿಯಬೇಕಾ, ನೇಣು ಹಾಕಿಕೊಳ್ಳಬೇಕಾ? ಬಾಯ್ಬಿಟ್ಟು ಸ್ಪಷ್ಟವಾಗಿ ಹೇಳಿಬಿಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಮಂಡ್ಯದಲ್ಲಿ ಒಂದೂವರೆ ವರ್ಷದ ಬಾಕಿ ಬಿಲ್ ಗೆ ಎಲ್ಓಸಿ ನೀಡಲು 7 ಪರ್ಸೆಂಟ್ ಲಂಚ ಕೇಳುತ್ತಿದ್ದಾರೆಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರು 40% ಕಮಿಷನ್ ಬಗ್ಗೆ ಆರೋಪಿಸಿ ಒಂದು ವರ್ಷ ಕಳೆದಿದ್ದರೂ ನಿರ್ಲಜ್ಜ #40PercentSarkara 22 ಸಾವಿರ ಕೋಟಿ ಉಳಿಸಿಕೊಂಡಿದೆ.@BSBommai ಅವರೇ,
ಬಿಲ್ ಬಾಕಿ ಬಿಡುಗಡೆ ಮಾಡಲು #PayCM ಮಾಡ್ಬೇಕಾ, ಚೆಕ್ ಕೊಡಬೇಕಾ, RTGS ಮಾಡ್ಬೇಕಾ?ಅಥವಾ ವಿಷ ಕುಡಿಯಬೇಕಾ, ನೇಣು ಹಾಕಿಕೊಳ್ಳಬೇಕಾ?
ಬಾಯ್ಬಿಟ್ಟು ಸ್ಪಷ್ಟವಾಗಿ ಹೇಳಿಬಿಡಿ. pic.twitter.com/TcEFbNrA8X— Karnataka Congress (@INCKarnataka) March 14, 2023
“>
2 ವರ್ಷಗಳಿಂದ ಬಿಲ್ ಬಾಕಿ ಉಳಿಸಿಕೊಂಡಿರುವ 40 ಪರ್ಸೆಂಟ್ ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಗುತ್ತಿಗೆದಾರರ ಬಲಿ ಬೇಕು? 7 ಜನ ಗುತ್ತಿಗೆದಾರರು ಜೀವ ಬಿಟ್ಟರೂ, ಪ್ರಧಾನಿಗೆ ಪತ್ರ ಬರೆದರೂ ನ್ಯಾಯ ಸಿಗುತ್ತಿಲ್ಲ, ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಭಂಡತನ ಬಿಡುತ್ತಿಲ್ಲ. ಕೈಬೀಸಲು ಬರುವ ಪ್ರಧಾನಿ ಗುತ್ತಿಗೆದಾರರ ಬಗ್ಗೆ ನೋಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದೆ.
ಇಷ್ಟು ದಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆದರೆ ಬಿಜೆಪಿ ಸರ್ಕಾರದ ಪರ್ಸೆಂಟೆಜ್ ದುರಾಸೆಗಾಗಿ ಈಗ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಕೆಂಪಣ್ಣ ಆತಂಕ ವ್ಯಕ್ತಪಡಿಸಿದರು. ಮಂಡ್ಯ ಗುತ್ತಿಗೆದಾರರು ಇತ್ತೀಚೆಗೆ ದೂರವಾಣಿ ಕರೆ ಮಾಡಿ ಎಲ್ಓಸಿ ಬಿಡುಗಡೆ ಮಾಡದಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದರು. ಆದರೆ ನಾನು ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ, ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ತಿಳಿಸಿದ್ದೇನೆ ಎಂದು ವಿವರಿಸಿದರು.




