ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಪಿ.ಎಂ.ನರೇಂದ್ರಸ್ವಾಮಿ ಅವರ ಘನತೆಗೆ ಶೋಭೆ ತರುವ ವಿಚಾರವಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಎಚ್ಚರಿಕೆ ನೀಡಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದಲ್ಲಿ ದಕ್ಷಿಣದ ರಾಜ್ಯಕ್ಕೆ ಪ್ರಧಾನಿ ಹುದ್ದೆ ಕೊಟ್ಟಿದ್ದರೆ ಅದು ಜೆಡಿಎಸ್ ಪಕ್ಷಕ್ಕೆ ಮಾತ್ರ. ನಮ್ಮ ರಾಜ್ಯದಿಂದ ಹೆಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿರುವುದನ್ನು ಯಾರೂ ಮರೆಯಬಾರದು. ಇಂತಹ ಪಕ್ಷದ ಬಗ್ಗೆ ಮಾಜಿ ಶಾಸಕ ನರೇಂದ್ರ ಸ್ವಾಮಿ ಅವರು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದರು.
ಜೆಡಿಎಸ್ ಪಕ್ಷ ಪುಟ್ಗೋಸಿ ಪಕ್ಷವಾಗಿದ್ದರೆ ಕೆ.ಅನ್ನದಾನಿ ಅವರ ವಿರುದ್ದ ಸೋಲನ್ನು ಏಕೆ ಅನುಭವಿಸಬೇಕಾಗಿತ್ತು. ಜೆಡಿಎಸ್ ಪಕ್ಷ ಅಜಾರಾಮರ ಪಕ್ಷವಾಗಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಪಡೆದಿದೆ. ಈ ಪಕ್ಷದಿಂದ ಹಲವರು ದೊಡ್ಡ ದೊಡ್ಡ ನಾಯಕರಾಗಿ ಅನ್ಯ ಪಕ್ಷಕ್ಕೆ ಹೋಗಿರುವುದನ್ನು ಮರೆಯಬಾರದು. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಮಾತನಾಡುವುದನ್ನು ಕಲಿಯಬೇಕು.ಇಲ್ಲದಿದ್ದರೆ ಜೆಡಿಎಸ್ ಕಾರ್ಯಕರ್ತರು ಸುಮ್ಮನಿರೋಲ್ಲ ಎಂದು ಎಚ್ಚರಿಕೆ ನೀಡಿದರು.




