Thursday, September 19, 2024

ಪ್ರಾಯೋಗಿಕ ಆವೃತ್ತಿ

ಗೃಹೋಪಯೋಗಿ ವಸ್ತುಗಳಿದ್ದ ಕಂಟೈನರ್ ವಶಕ್ಕೆ

ಮತದಾರರಿಗೆ ಹಂಚಲು ರಾಜಕೀಯ ಪಕ್ಷವೊಂದರ ಸ್ಟಿಕ್ಕರ್ ಅಂಟಿಸಿರುವ ಗೃಹೋಪಯೋಗಿ ವಸ್ತುಗಳನ್ನು ಸಾಗಿಸುತ್ತಿದ್ದ ಕಂಟೈನಲ್ ಲಾರಿಯನ್ನ ಚೆಕ್‌ಪೋಸ್ಟ ನಲ್ಲಿ ಮಂಡ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ತುಂಬಿಕೊಂಡು ಬಂದ ಕಂಟೈನರ್ ಲಾರಿಯನ್ನು ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ‌.

ಕಂಟೈನಲ್ ಲಾರಿಯು ಬೆಂಗಳೂರಿನಿಂದ ಅರಕಲಗೂಡು ಕಡೆಗೆ ಹೋಗುತ್ತಿತ್ತು. ಆಗ ನಗರದ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಮತದಾರರಿಗೆ ಕೊಂಡೊಯ್ಯುತ್ತಿರುವ ಬಗ್ಗೆ ತಿಳಿದು ಬಂದಿದೆ. ಕೂಡಲೇ ಪೊಲೀಸರು ಲಾರಿಯಲ್ಲಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಕಂಟೈನರ್ ಲಾರಿಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಪ್ರಮುಖ ರಾಜಕೀಯ ಪಕ್ಷವೊಂದಕ್ಕೆ ಸೇರಿದ್ದು ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸೆಂಟ್ರಲ್ ಠಾಣೆಯಲ್ಲಿ ಕಂಟೈನರ್ ನಿಂತಿದ್ದು,ಸ್ಪಷ್ಟವಾದ ಯಾವುದೇ ಮಾಹಿತಿ ಪೋಲಿಸರು ನೀಡದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!