Friday, November 20, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರದಲ್ಲಿ ದೊಡ್ಡ ಗಾರ್ಮೆಂಟ್ಸ್ ಸ್ಥಾಪನೆ : ಸಿ.ಎಸ್. ಪುಟ್ಟರಾಜು

ಮಹಿಳೆಯರಿಗೆ ಉದ್ಯೋಗ ಒದಗಿಸಲು ಹಾಗೂ ಆರ್ಥಿಕವಾಗಿ ಸದೃಢರಾಗುವ ಉದ್ದೇಶದಿಂದ ಪಾಂಡವಪುರ  ರೈಲ್ವೆ ನಿಲ್ದಾಣ ಸಮೀಪ ಹಾಗೂ ಜಕ್ಕನಹಳ್ಳಿ ವೃತ್ತದ ಬಳಿ ದೊಡ್ಡ ಮಟ್ಟದ ಗಾರ್ಮೆಂಟ್ಸ್ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಮೇಲುಕೋಟೆ ಯೋಜನಾ ಕಚೇರಿ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಆಯೋಜಿಸಿದ್ದ ‘ಮಹಿಳಾ ವಿಚಾರಗೋಷ್ಠಿ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಗಾಟಿಸಿದ ನಂತರ ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪಿಸಿ, ಲಕ್ಷಾಂತರ ಮಹಿಳಾ ಕುಟುಂಬಸ್ಥರ ಬದುಕಿಗೆ ಆಸರೆಯಾಗಿದ್ದಾರೆ. ಸಂಸ್ಥೆ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಸಮಾಜದ ಅಭಿವೃದ್ಧಿ‌ಗೆ ಸೇವೆ ಸಲ್ಲಿಸುತ್ತಿರುವ  ಹೆಗ್ಗಡೆ ಅವರ ಕಾರ್ಯವೈಖರಿ ನಮಗೆಲ್ಲಾ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಕಳೆದ 2006ರಲ್ಲಿ ತಾಲೂಕಿನ ಬೇಬಿಬೆಟ್ಟದ ಮಠದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಗಡೆ, ತುಮಕೂರು ಮಠದ ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆರ್ಶೀವಾದದೊಂದಿಗೆ ನನ್ನ ಪುತ್ರಿಯ ವಿವಾಹ ಸೇರಿದಂತೆ ಒಟ್ಟು 156 ಜೋಡಿಗಳ ವಿವಾಹಕ್ಕೆ ಆಗಮಿಸಿದ್ದು ನಮ್ಮ ಪುಣ್ಯದ ಕ್ಷಣವಾಗಿದೆ ಎಂದರು.

ಮಹಿಳಾ ಗೋಷ್ಟಿಯಲ್ಲಿ ಮಹಿಳೆಯರ ಆರ್ಥಿಕ ಭದ್ರತೆ, ಸರ್ಕಾರದ ಯೋಜನೆಗಳ ಸದುಪಯೋಗ, ಸಮಸ್ಯೆ ಬಗ್ಗೆ ಅನೇಕ ಮಹಿಳೆಯರು ವಿಷಯ ಮಂಡಿಸಲಾಯಿತು.

ಗೋಷ್ಠಿ ಅಂಗವಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ, ಪೌಷ್ಟಿಕ ಆಹಾರ ಮೇಳ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ತಹಶೀಲ್ದಾರ್ ಕೆ.ಸಿ.ಸೌಮ್ಯ, ಶ್ರೀಕ್ಷೇತ್ರ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಪೊಲೀಸ್ ಇನ್ಸ್ ಪೆಕ್ಟರ್ ಎಂ.ಆರ್.ಲವ, ವಕೀಲೆ ಎಸ್.ಆರ್. ಸುಧಾ, ಕ್ಷೇತ್ರ ಯೋಜನಾಧಿಕಾರಿ ಬಿ.ಸರೋಜ, ಬೆಟ್ಟಸ್ವಾಮೀಗೌಡ ಸೇರಿದಂತೆ ಅನೇಕ ಗಣ್ಯರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ