ನಾಗಮಂಗಲ ತಾಲ್ಲೂಕಿನ ಮಹಿಳೆಯರ ಆರ್ಥಿಕ ಸುಧಾರಣೆಗಾಗಿ ಮಹಿಳಾ ಸಹಕಾರ ಬ್ಯಾಂಕ್ ಸ್ಥಾಪಿಸುತ್ತಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಅನಿಕೇತನ್ ಗೌಡ ತಿಳಿಸಿದರು.
ನಾಗಮಂಗಲ ಪಟ್ಟಣದ ಶ್ರೀ ಬಡಗೂಡಮ್ಮ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಜನರ ಆರ್ಥಿಕ ಸುಧಾರಣೆಯ ಉದ್ದೇಶವನ್ನು ಇಟ್ಟುಕೊಂಡು ಸಹಕಾರಿ ಬ್ಯಾಂಕ್ ಸ್ಥಾಪಿಸುತ್ತಿದ್ದೇನೆ. ಇದು ಪ್ರತಿಯೊಬ್ಬರ ಬ್ಯಾಂಕ್,ಗ್ರಾಹಕರೇ ಈ ಬ್ಯಾಂಕಿನ ಮಾಲೀಕರು. ಪ್ರತಿಯೊಬ್ಬರಿಗೂ ಸ್ವಂತ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಈ ಬ್ಯಾಂಕ್ ಸ್ಥಾಪನೆ ಮಾಡುತ್ತದ್ದೇನೆ.ಇದು ನನ್ನ ಹೆಸರಿನಲ್ಲಿ ಸ್ಥಾಪನೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಅಲ್ಲ, ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪನೆ ಮಾಡುತ್ತಿರುವ ಬ್ಯಾಂಕ್ ಎಂದರು.
ಈ ಬ್ಯಾಂಕ್ ನಲ್ಲಿ ನಾನು ಕೂಡ ಸಾಮಾನ್ಯ ವ್ಯಕ್ತಿ.ಬ್ಯಾಂಕ್ ನಲ್ಲಿ ಷೇರು ದಾಖಲಾಗುವುದರಿಂದ ಆಗುವ ಅನುಕೂಲಗಳನ್ನು ತಿಳಿಸಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ನನಗೊಂದು ಅವಕಾಶ ಕೊಡಿ,ಚುನಾವಣೆ ಹಿಂದಿನ ದಿನ 200-300 ಚಿಲ್ಲರೆ ಹಣವನ್ನು ನೀಡಿ ಶಾಸಕರಾಗಲು ಬಂದಿರುವ ವ್ಯಕ್ತಿಗಳಿಗೆ ಅವಕಾಶ ಕೊಡಬೇಡಿ. ಅವರು ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಹೋಗುವವರು.ನನ್ನಂತ ಜನರ ಅಭಿವೃದ್ಧಿಗೆ ದುಡಿಯುವ ವ್ಯಕ್ತಿಯನ್ನ ಆಯ್ಕೆ ಮಾಡಿ ಎಂದು ಹೇಳಿದರು. ಮಹಿಳೆಯರ ಜೊತೆಗೆ ಚರ್ಚೆ ಮಾಡಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಸ್ಥಾಪನೆಗೆ ಶ್ರಮಿಸಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚೇತನ್, ಶ್ರೀನಿವಾಸ್ ಚಿಣ್ಯ, ಮಂಜು ಬಿಂಡಿಗನವಿಲೆ, ರೂಪ ವೀರೇಶ್,ಶೈಲಜಾ, ರವಿ, ಗೋಪಿ ಮುಂತಾದವರು ಭಾಗವಹಿಸಿದ್ದರು.




