Thursday, November 19, 2026

ಪ್ರಾಯೋಗಿಕ ಆವೃತ್ತಿ

”ಆಧಾರ್-ಪ್ಯಾನ್ ಕಾರ್ಡ್ ಲಿಂಕ್ | ”ಜನರ ಹಣ ಸುಲಿಗೆ ಮಾಡುವುದು ಬಿಜೆಪಿಗೆ ಅಭ್ಯಾಸವಾಗಿ ಬಿಟ್ಟಿದೆ” – ಜೆಡಿಎಸ್

ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಲು ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡಿರುವುದು ಹಗಲು ದರೋಡೆ‌ ಅಲ್ಲದೆ ಮತ್ತೇನು? ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ದುಡ್ಡು ಈ ರೀತಿ ಸುಲಿಗೆ ‌ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಇವರನ್ನು ಅಧಿಕಾರಕ್ಕೆ ತಂದು ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷ ಕಿಡಿಕಾರಿದೆ.

“>

ಈ ಜೋಡಣೆ ಪ್ರಕ್ರಿಯೆ ಈ ತಿಂಗಳೊಳಗೆ ಮಾಡದಿದ್ದರೆ 10 ಸಾವಿರ ರೂ. ದಂಡ ತೆರಬೇಕಂತೆ! ಪ್ಯಾನ್ ಕಾರ್ಡ್ ಗೆ ಆಧಾರ್ ಜೋಡಿಸದಿದ್ದರೆ ಅಥವಾ ತಡವಾಗಿ ಜೋಡಿಸುವುದಕ್ಕೆ ದಂಡ ವಿಧಿಸಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಇದು ಸರ್ವಾಧಿಕಾರಿ ನಡೆ. ಹೇಳುವವರು-ಕೇಳುವವರು ಇಲ್ಲದ ಕುಸಿದ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಜೆಡಿಎಸ್ ಪಕ್ಷ ಟ್ವೀಟರ್ ನಲ್ಲಿ ಆಕ್ರೋಶ ಹೊರಹಾಕಿದೆ.

ನಕಲಿ ಪ್ಯಾನ್ ಕಾರ್ಡು ಹೊಂದಿದವರನ್ನು ಹಿಡಿಯಲು ಈ ಕ್ರಮ ಎಂದು ಪ್ರಲಾಪ‌ ಕೊಚ್ಚುವವರೆ, ನಾಲ್ಕು ಜನ ಕಳ್ಳರನ್ನು ಹಿಡಿಯಲು ಸಕಲ ಜನಸಾಮಾನ್ಯರೇಕೆ ಶುಲ್ಕ ತೆರಬೇಕು? ಇದನ್ನು ದುಡ್ಡು ಕೊಟ್ಟು ಮಾಡಿಸಿಕೊಳ್ಳುವಂತೆ ಕಡ್ಡಾಯಗೊಳಿಸಿದ್ದು ಏಕೆ? ಹೀಗೆ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ವ್ಯವಸ್ಥೆಯೇ ಜನದ್ರೋಹಿಯಾದದ್ದು. ನಾಚಿಕೆಯಾಗಬೇಕು! ನಿಮಗೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ