ಮದ್ದೂರು ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ತಹಸೀಲ್ದಾರ್ ಟಿ.ಎನ್. ನರಸಿಂಹಮೂರ್ತಿ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಹಣವನ್ನು ಎಣಿಕೆ ಕಾರ್ಯ ಜರುಗಿತು.
ಪ್ರಸಕ್ತ 6 ತಿಂಗಳಿನಿಂದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ತಹಸೀಲ್ದಾರ್ ಹಾಗೂ ರೆವಿನ್ಯೂ ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿ ತೆರೆದು ಎಣಿಕೆ ನಡೆಸಿದ ವೇಳೆ 5 ಲಕ್ಷದ 93 ಸಾವಿರದ 100 ರೂ ಹಣ ಸಂಗ್ರಹ ವಾಗಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಈ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳಾದ ಜಗದೀಶ್, ರವಿಶಂಕರ್, ಜಿ.ವಿ. ಮಹೇಶ್ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ, ಪಾರಿ ಪತ್ತೆದಾರ ರಘು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ರಾಮನವಮಿ ವಿಶೇಷ ಪೂಜಾ ಕಾರ್ಯಕ್ರಮ :
ಮದ್ದೂರು ಪಟ್ಟಣದ ಶ್ರೀ ಹೊಳೆಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾರ್ಚ್ 30 ಗುರುವಾರ ಬೆಳಿಗ್ಗೆ 7ಗಂಟೆ ಯಿಂದ ಆರಂಭವಾಗುವ ಪೂಜಾ ಕಾರ್ಯಕ್ರಮದಲ್ಲಿ ಮಧು ಅಭಿಷೇಕ, 7:30 ಗಂಟೆಗೆ ಪಂಚಾಮೃತ ಅಭಿಷೇಕ, ಮುಖ್ಯ ಪ್ರಾಣ ದೇವರಿಗೆ ವಿಶೇಷ ಹೂ ಅಲಂಕಾರ, 10ಕ್ಕೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ 10:45ಕ್ಕೆ ರಾಮಸೀತ ಹನುಮದ್ ಲಕ್ಷ್ಮಣ ಸಮೇತ ಪ್ರಕಾರೋತ್ಸವ ನೆರವೇರಲಿದೆ.




