Thursday, November 19, 2026

ಪ್ರಾಯೋಗಿಕ ಆವೃತ್ತಿ

ಭ್ರಷ್ಟಾಚಾರಿ ಶಾಸಕ ಅನ್ನದಾನಿ ಬಂಧಿಸಲು ಸಿಪಿಐಎಂ ಆಗ್ರಹ

ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುತ್ತೇವೆ ಸಹಕಾರ ನೀಡಿ ಎಂದು ಖಾಸಗಿ ಮಾಧ್ಯಮದ ಸ್ಟಿಂಗ್ ಆಪರೇಷನ್ ನಲ್ಲಿ ಬಹಿರಂಗವಾಗಿ ಲಂಚ ಪಡೆದಿರುವ ಶಾಸಕ ಡಾ. ಕೆ.ಅನ್ನದಾನಿಯವರನ್ನು ಈ ಕೂಡಲೇ ಬಂಧಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸಿದೆ‌.

ಜೆಡಿಎಸ್‌ ಪಕ್ಷದ ಮಾಜಿ ಶಾಸಕರಾದ ಅನ್ನದಾನಿಯವರು ಮಳವಳ್ಳಿ ತಾಲ್ಲೂಕಿನಲ್ಲಿ ಆಪ್ಟಿಕಲ್ ಫೈಬರ್ ಅಳವಡಿಸಲು ಫೈಬರ್ ಕಂಪನಿಯವರಿಂದ ಲಂಚ ಕೇಳುವುದು, ಒಂದು ಲಕ್ಷ ರೂ.ಲಂಚದ ಹಣವನ್ನು ಪಡೆದು ಜೇಬಿಗಿಳಿಸುವುದು ಕ್ಯಾಮೆರಾದಲ್ಲಿ ದಾಖಲಾಗಿದೆ. ಇದನ್ನೇ ಸಾಕ್ಷಿಯೆಂದು ಪರಿಗಣಿಸಿ ಅನ್ನದಾನಿಯನ್ನು ಬಂಧಿಸಿ ಜೈಲಿಗಟ್ಟಬೇಕೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್‌.ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಜನತೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಅನ್ನದಾನಿಯವರು ಚುನಾವಣೆಯಲ್ಲಿ ಮತದಾರರನ್ನು ಕೊಳ್ಳಲು ಲಂಚದ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ತೊಡಗಿರುವಂತೆ ಕಾಣುತ್ತಿದೆ. ಇದು ನಾಚಿಕೆಗೇಡು, ಮಾಜಿ ಶಾಸಕರಿಗೆ ಆತ್ಮಸಾಕ್ಷಿ ಇದ್ದರೆ ಈ ಕೂಡಲೇ ಸಾರ್ವಜನಿಕ ಜೀವನವನ್ನು ತ್ಯಜಿಸಿ ಯಾವುದಾದರೂ ಸಂಪಾದನೆಯ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳ ಬಯಸುತ್ತೇನೆ.

ಶಾಸಕರು ಲಂಚದ ವ್ಯವಹಾರ ಕುದುರಿಸಲು ನಡೆಸುವ ಮಾತುಕತೆಗಳು ತಾಲ್ಲೂಕಿನ ಜನತೆ ಮತ್ತು ಅವರಿಗೆ ಮತ ನೀಡಿದ ಜನರು ತಲೆ ತಗ್ಗಿಸುವಂತಿವೆ. ಇಂತವರೆಲ್ಲಾ ಶಾಸಕರು, ಜನ ಪ್ರತಿನಿಧಿಗಳು ಆಗುವುದು ನಾಚಿಕೆಗೇಡು. ಇಂತವರಿಗೆ ಟಿಕೆಟ್ ನೀಡುವ ಪಕ್ಷಗಳೂ ತಮ್ಮನ್ನು ವಿಮರ್ಶೆ ಮಾಡಿಕೊಳ್ಳಬೇಕೆಂದು CPIM ಆಗ್ರಹಿಸುತ್ತದೆ.

ಚುನಾವಣೆ ಸಮಯದಲ್ಲಿ ಈ ವಿಡಿಯೋ ಬಹಿರಂಗಗೊಳಿಸಿರುವುದು ರಾಜಕೀಯ ಪಿತೂರಿ ಎಂದು ನುಣುಚಿಕೊಳ್ಳಲು ಅನ್ನದಾನಿಯವರು ಪ್ರಯತ್ನಿಸಬಹುದು. ಆದರೆ ಲಂಚ ತೆಗೆದುಕೊಂಡಿರುವುದು ನೀವೇ ಆಗಿರುವುದು ವಿಡಿಯೋದಲ್ಲಿ ದಾಖಲಾಗಿರುವುದರಿಂದ ನಾಟಕ ಬಿಟ್ಟು ಮರ್ಯಾದೆಯಿಂದ ಸಾರ್ವಜನಿಕ ಬದುಕಿನಿಂದ ತೊಲಗಿ, ಕಾನೂನು ಕ್ರಮ ಎದುರಿಸುವುದು ಒಳ್ಳೆಯದು ಎಂದು CPIM ಅಭಿಪ್ರಾಯ ಪಡುತ್ತದೆ.

ಕೂಡಲೇ ಅನ್ನದಾನಿಯವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) CPIM ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್‌.ಕೃಷ್ಣೇಗೌಡ ಈ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ