Thursday, November 19, 2026

ಪ್ರಾಯೋಗಿಕ ಆವೃತ್ತಿ

ಹಣ – ಅಧಿಕಾರಕ್ಕೆ ಆಸೆ ಪಡದೆ ಸಮಾಜಕ್ಕಾಗಿ ದುಡಿದ ಬಾಣಸವಾಡಿ ನಾಗಣ್ಣ : ಚಲುವರಾಯಸ್ವಾಮಿ

ಹಣ ಹಾಗೂ ಅಧಿಕಾರಕ್ಕಾಗಿ ಆಸೆ ಪಡದೆ, ಹಲವು ವೈಯಕ್ತಿಕ ಸಮಸ್ಯೆಗಳ ನಡುವೆಯೂ ಒಕ್ಕಲಿಗ ಸಮಾಜಕ್ಕಾಗಿ ದುಡಿದ ಅಪರೂಪದ ವ್ಯಕ್ತಿ ಬಾಣಸವಾಡಿ ನಾಗಣ್ಣ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಸ್ಮರಿಸಿದರು.

ಮಂಡ್ಯನಗರದ ರೈತಸಭಾಂಗಣದಲ್ಲಿ ಶುಕ್ರವಾರ ನಡೆದ ಬಾಣಸವಾಡಿ ನಾಗಣ್ಣ ಶ್ರದ್ಧಾಂಜಲಿ  ಕಾರ್ಯಕ್ರಮದಲ್ಲಿ ಭಾವವಹಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಜೀವಿಸಿದ್ದಾಗ ಆತನಿಗೆ ಸಹಾಯ ಮಾಡುವವರು ವಿರಳ. ಆದರೆ ಆತ ನಿಧನವಾದ ನಂತರ ಸ್ಮರಣೆ ಮಾಡುತ್ತೇವೆಯಷ್ಟೆ. ಸಮಾಜಕ್ಕಾಗಿ ದುಡಿದ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಒಕ್ಕಗಲಿಗರ ಸಂಘದ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ನೋವಿನ ವಿಚಾರ ಎಂದು ವಿಷಾದ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆ ಒಂದು ಮಾದರಿ ಜಿಲ್ಲೆ ಎಂದೇ ಹೇಳಬಹುದು. ಹಿಂದೆ ಸಾಹುಕಾರ್ ಚನ್ನೇಗೌಡ, ಎಚ್.ಕೆ.ವೀರಣ್ಣ ಗೌಡರಂತವರು ಅಗ್ರ ಪಂಕ್ತಿ ಹಾಕಿಕೊಟ್ಟಿದ್ದಾರೆ. ಇದರಿಂದಾಗಿಯೇ ಮಂಡ್ಯ ಎಂದರೆ ಇಂದಿಗೂ ಗೌರವವಿದೆ. ನಾಗಣ್ಣನೂ ಕೂಡ ಸಮಾಜಕ್ಕಾಗಿ ಸಮರ್ಪಿಸಿಕೊಂಡ ವ್ಯಕ್ತಿಯಾಗಿ ನಿಲ್ಲುತ್ತಾರೆ. ಆತನಿಗೆ ಬದುಕಿದ್ದಾಗ ನಾನು ಸಹಾಯ ಮಾಡಲಿಲ್ಲ ಎಂಬ ಕೊರಗಿದೆ. ಈ ಚುನಾವಣೆ ಮುಗಿದ ನಂತರ ಆತನ ಮಗನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದಸ್ವಾಮಿ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ