ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಹುಳು ಮಿಶ್ರಿತ ಅಕ್ಕಿಯಲ್ಲೇ ಆಹಾರ ತಯಾರಿಸಿದ್ದಾಗ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿ, ಸಿಬ್ಬಂದಿ ವರ್ಗಕ್ಕೆ ತರಾಟೆಗೆ ತೆಗೆದುಕೊಂಡ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಪಾಂಡವಪುರ ಪಟ್ಟಣದ ಚಿಕ್ಕಮಸೀದಿ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸುಮಾರು 12 ಮಂದಿ ಪುಟಾಣಿ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆ ಶೋಭ ಸಮ್ಮುಖದಲ್ಲಿ ಅಡುಗೆ ಸಿಬ್ಬಂದಿ ವರ್ಗ ಅನ್ನ ಮಾಡಲು ವಿಪರೀತ ಹುಳುವಿದ್ದ ಅಕ್ಕಿಯನ್ನು ಕುಕ್ಕರ್ ನಲ್ಲಿ ತೊಳೆಯುತ್ತಿದ್ದಾಗ ಅಕ್ಕಪಕ್ಕದಲ್ಲಿದ್ದ ಮಕ್ಕಳ ಪೋಷಕರಾದ ಮಾನಸ, ಅನುಷ, ಭವ್ಯ ಸೇರಿದಂತೆ ಅನೇಕರು ಆಕಸ್ಮಿಕವಾಗಿ ವೀಕ್ಷಿಸಿ, ಅಡುಗೆ ತಯಾರಿಕೆಯನ್ನು ತಡೆದು, ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಪದಾರ್ಥ ನೀಡಬೇಕು. ಆದರೆ ನೀವು ಹುಳು ಇರುವ ಅಕ್ಕಿಯಲ್ಲಿ ಅಡುಗೆ ತಯಾರಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ, ಇಂತಹ ಕಳಪೆ ಮಟ್ಟದ ಅಕ್ಕಿಯಲ್ಲಿ ಅಡುಗೆ ತಯಾರಿಸಬೇಡಿ ಎಂದು ಎಚ್ಚರಿಸಿದರು.

ಹುಳುವಿದ್ದ ಅಕ್ಕಿಯಲ್ಲಿ ಅಡುಗೆ ತಯಾರಿಸುತ್ತಿದ್ದ ವಿಷಯ ತಿಳಿದ ತಕ್ಷಣ ಕನ್ನಡ ಸೇನೆ ಪಾಂಡವಪುರ ತಾಲೂಕು ಅಧ್ಯಕ್ಷ ದೇವು ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಹುಳು ಇದ್ದ ಅಕ್ಕಿ ಚೀಲವನ್ನು ಪರಿಶೀಲಿಸಿದಾಗ, ಎಲ್ಲಾ ಅಕ್ಕಿ ಮೂಟೆಗಳಲ್ಲೂ ಹುಳು ಕಂಡು ಬಂದಿದೆ.
ಪೋಷಕರು ಸಿಡಿಪಿಓ ನಟರಾಜು ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ, ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿ ನಟರಾಜು ಆಗಮಿಸಿದಾಗ, ಪೋಷಕರು ಪ್ರಶ್ನಿಸಿ, ಎಚ್ಚರಿಸಿದರು.

ಭಾರತ ಆಹಾರ ನಿಗಮ ಮೈಸೂರು ಅಥವಾ ಚಾಮರಾಜನಗರ ಶಾಖೆಯಿಂದ ಪಾಂಡವಪುರ ಹಾಗೂ ಕೆಆರ್ ಪೇಟೆ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಎಂಎಸ್ ಪಿಸಿ ವತಿಯಿಂದ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
ಎಂಎಸ್ ಪಿಸಿ ಸಂಸ್ಥೆಯಿಂದ ನೀಡುವ ಅಕ್ಕಿ ಕಳಪೆ ಮಟ್ಟದಿಂದ ಕೂಡಿದೆ. ಹುಳುವಿದ್ದ ಅಕ್ಕಿಯನ್ನು ಪುಟಾಣಿ ಮಕ್ಕಳಿಗೆ ಅಡುಗೆ ತಯಾರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಿಡಿಪಿಓ ನಟರಾಜು ಅವರಿಗೆ ಪೋಷಕರು ತರಾಟೆಗೆ ತೆಗೆದುಕೊಂಡಾಗ, ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ ಎಂದು ಭರವಸೆ




