Friday, November 20, 2026

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿ ಕಾರ್ಯಗಳೇ ನಮ್ಮ ತಂದೆಯ ಗೆಲುವಿಗೆ ಶ್ರೀರಕ್ಷೆ : ಧನ್ಯತಾ ಸುರೇಶ್‌ಗೌಡ

ವರದಿ: ಪ್ರಭು ವಿ.ಎಸ್. 

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಸುರೇಶ್‌ಗೌಡ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ತಂದೆಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಧನ್ಯತಾ ಸುರೇಶ್‌ಗೌಡ ತಿಳಿಸಿದರು.

ಮದ್ದೂರು ತಾಲೂಕಿನ ಕೊಪ್ಪ ಜಿ.ಪಂ. ವ್ಯಾಪ್ತಿಯ ಬೆಕ್ಕಳಲೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶಾಸಕ ಸುರೇಶ್‌ಗೌಡ ಪರ ಬಿರುಸಿನ ಮತ ಪ್ರಚಾರ ಕೈಗೊಂಡು ಮಾತನಾಡಿದ ಅವರು ಕಳೆದ ಐದು ವರ್ಷಗಳಿಂದಲೂ ಕೊಪ್ಪ ಸೇರಿದಂತೆ ನಾಗಮಂಗಲ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಶ್ವತ ಯೋಜನೆಗಳನ್ನು ಕೈಗೊಂಡಿದ್ದು ಇಂದಿನ ಚುನಾವಣೆಯಲ್ಲಿ ಅವರಿಗೆ ವರದಾನವಾಗಲಿವೆ ಎಂದರು.

ಶಾಸಕ ಸುರೇಶ್‌ಗೌಡ ಅವರು ವಿರೋಧ ಪಕ್ಷದಲ್ಲಿದ್ದರೂ ಶೇ.90ರಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಅವರ ಗೆಲುವು ಶತಸಿದ್ಧವೆಂದ ಅವರು ನಮ್ಮ ತಂದೆ ಅಭಿವೃದ್ಧಿ ರಾಜಕೀಯ ಮಾಡುವವರೇ ಹೊರತು ಯಾವುದೇ ಸ್ವಾರ್ಥ, ವಂಶ ರಾಜಕೀಯ ಮಾಡುವುದಿಲ್ಲವೆಂದರು.

ನಾಗಮಂಗಲ ಕ್ಷೇತ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮತದಾರರು ಸ್ವ ಇಚ್ಚೆಯಿಂದ ತಮ್ಮ ತಂದೆಯನ್ನು ಬೆಂಬಲಿಸಿ ಮತ್ತೊಮ್ಮೆ ಶಾಸಕರನ್ನಾಗಿಸಲು ನಿರ್ಧಾರ ಕೈಗೊಂಡಿದ್ದು ಕುಡಿಯುವ ನೀರು, ನಾಲೆಯ ಅಭಿವೃದ್ಧಿ, ದಲಿತ ಕಾಲೋನಿಗಳಿಗೆ ಮೂಲ ಸೌಲಭ್ಯ, ಹತ್ತು ಹಲವು ಸೌಲಭ್ಯಗಳನ್ನು ಒದಗಿಸಿ ಮಾದರಿ ಕ್ಷೇತ್ರವನ್ನಾಗಿಸಿರುವುದಾಗಿ ಹೇಳಿದರು.

ತಾವು ಕಳೆದ ಚುನಾವಣೆಯಲ್ಲಿ ವಿದೇಶದಲ್ಲಿದ್ದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಲು ಸಾಧ್ಯವಾಗದ ಕಾರಣ ಪ್ರಸಕ್ತ ಎದುರಾಗಿರುವ ಚುನಾವಣೆಯಲ್ಲಿ ತಮ್ಮ ತಂದೆಯ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದು ಕ್ಷೇತ್ರದ ಜನರು ತಮ್ಮೊಟ್ಟಿಗೆ ಶ್ರಮಿಸುತ್ತಿರುವುದು ನನಗೆ ಸಂತಸವನ್ನುಂಟು ಮಾಡಿದೆ ಎಂದರು.

ತಾಲೂಕಿನ ಪಟೇಲಕೊಪ್ಪಲು, ಸಿದ್ದೇಗೌಡನಕೊಪ್ಪಲು, ಹೊಸಕೊಪ್ಪಲು, ರುದ್ರೇಗೌಡನಕೊಪ್ಪಲು, ಕಿರಂಗೂರು, ಹಳೇಹಳ್ಳಿ, ತರಿಕೆರೆ ಕಾಲೋನಿ ಇನ್ನಿತರೆ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರೊಂದಿಗೆ ಚರ್ಚಿಸಿ ತಮ್ಮ ತಂದೆ ಸುರೇಶ್‌ಗೌಡ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆ ತಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮೀ ಚನ್ನರಾಜು, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕುಶ, ಗ್ರಾ.ಪಂ. ಉಪಾಧ್ಯಕ್ಷ ಹೊನ್ನೇಗೌಡವಾಣಿ, ಮುಖಂಡರಾದ ಶಶಿ, ಪುಟ್ಟಸ್ವಾಮಿ, ರಾಜಣ್ಣ, ಕೆಂಪಣ್ಣ, ಹೊಂಬಾಳೆ, ಸಿದ್ದಪ್ಪ, ಶಿವಣ್ಣ, ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ