Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರಿನ ಗಾಂಧಿ ಪಾರ್ಕ್ ಶ್ರಮಿಕ ನಗರವನ್ನು ಸ್ಲಂ ಎಂದು ಘೋಷಿಸಲು ಆಗ್ರಹ

ಮದ್ದೂರಿನ ಗಾಂಧಿ ಪಾರ್ಕ್ ಶ್ರಮಿಕ ನಗರದ ಜಾಗವನ್ನು ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯವರು ಕೊಳಚೆ ಪ್ರದೇಶ (ಸ್ಲಂ) ಎಂದು ಘೋಷಣೆ ಮಾಡಿ ಅಲ್ಲಿನ ನಿವಾಸಿಗಳಿಗೆ  ಪರಿಚಯ ಪತ್ರ ಅಥವಾ ಹಕ್ಕುಪತ್ರ ನೀಡಬೇಕೆಂದು ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಶ್ರಮಿಕರು ವಾಸ ಮಾಡುತ್ತಿರುವ ಜಾಗವನ್ನು (ಸ್ಲಂ) ಎಂದು ಘೋಷಣೆ ಮಾಡಬೇಕು. ಇಲ್ಲವೆಂದರೆ ಈ ಬಾರಿ ಚುನಾವಣೆಗೆ ನಮ್ಮ ಓಟು ಕೊಡುವುದಿಲ್ಲ ಎಂದು ನಾವು ಘೋಷಣೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಅಲ್ಲಿನ ನಿವಾಸಿಗಳು ಗಾಂಧಿಪಾರ್ಕ್( ಸ್ಲಂ)ನಲ್ಲಿ ವಾಸಿಸುವ ಜಾಗದಲ್ಲಿ ಹಲವಾರು ಕಡೆಯಿಂದ ಬೆದರಿಕೆಗಳು ಬರುತ್ತಿದ್ದು, ರಾಜಕೀಯ ಪಕ್ಷಗಳು ಮತ್ತು ಸ್ಥಳೀಯ ಕೆಲವು ಸಮಾಜ ಘಾತುಕ ಶಕ್ತಿಗಳಿಂದ ನಮ್ಮನ್ನು ರಕ್ಷಿಸಬೇಕು. ನಮಗೆ ಯಾವ ತೊಂದರೆ ಆಗದಂತೆ ಜಿಲ್ಲಾಡಳಿತ ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.

ಮಂಡ್ಯ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಶ್ರಮಿಕ ನಗರಗಳಿವೆ, ಆದರೆ ಮದ್ದೂರಿನ ಗಾಂಧಿ ಪಾರ್ಕ್ ವಾರ್ಡ್ ನಂ 15 (ಸ್ಲಂ ) ಕೂಡಾ ಒಂದಾಗಿದೆ. ಆದರೆ 70 ವರ್ಷ ಕಳೆದರೂ ಇಂದಿಗೂ ಸಹ ಜಿಲ್ಲಾಡಳಿತ ಮತ್ತು ಕೊಳಚೆ ಅಭಿವೃದ್ದಿ ಮಂಡಳಿಯವರು ನಮ್ಮನ್ನು ಗುರಿತಿಸದೆ ನಿರ್ಲ್ಯಕ್ಷ ಮಾಡುತ್ತಲೇ ಬಂದಿದ್ದಾರೆ ಎಂದು ದೂರಿವರು.

ಸರ್ಕಾರಗಳು ಮತ್ತು ಈ ಆಡಳಿತ ವ್ಯವಸ್ಥೆ ಇಂದಿಗೂ ಸಹ ನಮ್ಮನ್ನು ವಂಚಿಸುತ್ತಲೆ ಮುಂದುವರೆದಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡುವಂತಹ ಜನರ ನಡುವೆ ವಾಸಕ್ಕೆ ಸರಿಯಾದ ಸೂರಿಲ್ಲದೆ ಮೂಲಭೂತ ಸೌಲಭ್ಯಗಳಿಲ್ಲದೆ ಪ್ರಾಣಿಗಳ ರೀತಿಯಲ್ಲಿ ಭಯದಿಂದ ಬದುಕುತ್ತಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೊರಕಿಸಿ ಕೊಟ್ಟಿರುವ ಸಂವಿಧಾನ ಬದ್ಧ ಹಕ್ಕುಗಳು ಸಹ ಇಂದಿಗೂ ನಮಗೆ ಸಿಗದಂತಾಗಿರುವುದು ದುಃಖದ ಸಂಗತಿ. ಬಲಾಢ್ಯರ ದರ್ಪದಲ್ಲಿ ನಮ್ಮಂತಹ ಬಾಯಿ ಇಲ್ಲದ ಜನರಿಗೆ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಗಾಂಧಿ ಪಾರ್ಕ್ (ಸ್ಲಂ)ಶ್ರಮಿಕ ನಗರ ಮುಖಂಡರಾದ ರವಿ, ಪ್ರಶಾಂತ್, ದೊಡ್ಡತಾಯಮ್ಮ,ಆಶಾ, ಸಣ್ಣಮ್ಮ, ರಾಜಣ್ಣ, ಜನಶಕ್ತಿ ಮುಖಂಡರಾದ ವೈದುನ, ನಗರಕೆರೆ ಜಗದೀಶ್, ಮಹಿಳಾ ಮನ್ನಡೆಯ ಶಿಲ್ಪ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ