Saturday, November 21, 2026

ಪ್ರಾಯೋಗಿಕ ಆವೃತ್ತಿ

ಆತ್ಮಾನಂದ ಮನೆಯಲ್ಲಿ ಅತೃಪ್ತ ‘ಕೈ’ ಆಕಾಂಕ್ಷಿಗಳ ಸಭೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಣಿಗ ರವಿಕುಮಾರ್ ಅವರಿಗೆ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಅವರ ನಿವಾಸದಲ್ಲಿ ಅತೃಪ್ತ ಕೈ ಟಿಕೆಟ್ ಆಕಾಂಕ್ಷಿಗಳು ಸಭೆ ಸೇರಿ ಚರ್ಚಿಸಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಬಿ. ಫಾರಂ ಬಯಸಿದ್ದ ಮಾಜಿ ಶಾಸಕ ಎಚ್.ಬಿ.ರಾಮು, ಅಮರಾವತಿ ಚಂದ್ರಶೇಖರ್, ಸಿದ್ಧಾರೂಢ ಸತೀಶ್ ಗೌಡ,ಬಿ.ಸಿ. ಶಿವಾನಂದ, ಹಾಲಹಳ್ಳಿ ರಾಮಲಿಂಗಯ್ಯ, ಹೊಸಹಳ್ಳಿ ಶಿವಲಿಂಗೇಗೌಡ ಮುಖಂಡರಾದ ಸಿದ್ದರಾಮೇಗೌಡ, ರಮೇಶ್ ಮಿತ್ರ ಮತ್ತಿತರ ಮುಖಂಡರು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದ್ದ ಗಣಿಗ ರವಿಕುಮಾರ್ ಅವರು ಸಮರ್ಥವಾಗಿ ಚುನಾವಣೆ ನಡೆಸದೆ ಗೆಲ್ಲುವ ಅವಕಾಶ ಕೈ ಚೆಲ್ಲಿದರು.ಈಗ ಮತ್ತೆ ಅವರಿಗೆ ಟಿಕೆಟ್ ನೀಡಲಾಗಿದೆ.ಈ ಬಾರಿಯೂ ಅವರು ಸಮರ್ಥವಾಗಿ ಚುನಾವಣೆ ನಡೆಸಲ್ಲ ಎಂಬ ಮಾಹಿತಿ ಇದ್ದರೂ ಕೂಡ ಅವರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ.ಕೂಡಲೇ ಕಾಂಗ್ರೆಸ್ ವರಿಷ್ಠರು ನಾವು ಈ ಹಿಂದೆ ಆಗ್ರಹಿಸಿದಂತೆ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುವುದಾಗಿ ಸಭೆಯಲ್ಲಿ ತೀರ್ಮಾನವಾಯಿತು.

ಈ ಬಗ್ಗೆ ಏ.10 ರವರೆಗೆ ಕಾದು ನೋಡುತ್ತೇವೆ.ಅಂದು ಮತ್ತೊಂದು ಸಭೆ ಮಾಡಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವುದಾಗಿ ಕೈ ಟಿಕೆಟ್ ಆಕಾಂಕ್ಷಿ ಸಿದ್ದಾರೂಢ ಸತೀಶ್ ಗೌಡ ನುಡಿ ಕರ್ನಾಟಕ.ಕಾಂ ಗೆ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ