Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ವಿಜೃಂಭಣೆಯಿಂದ ನಡೆದ ಬಡಗುಡಮ್ಮ ರಥೋತ್ಸವ

ನಾಗಮಂಗಲ ಪಟ್ಟಣದ ಆದಿಶಕ್ತಿ ಬಡಗುಡಮ್ಮ ದೇವಿಯ ಕೊಂಡೋತ್ಸವ ಹಾಗೂ ರಥೋತ್ಸವ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಶಕ್ತಿ ದೇವತೆಗಳಲ್ಲಿ ಬಡಗುಡಮ್ಮ ದೇವಿಯು ಪ್ರಮುಖ ಶಕ್ತಿ ದೇವತೆಯಾಗಿದ್ದು ನಾಗಮಂಗಲ ಪಟ್ಟಣದ ಟಿಬಿ ಬಡಾವಣೆ ಸಮೀಪದಲ್ಲಿ ಬಡಗುಡಮ್ಮ ದೇವಾಲಯವಿದೆ, ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ದೇವಿಯ ಆರಾಧನೆ ನಡೆದು ಶುಕ್ರವಾರ ಮಧ್ಯಾಹ್ನದಿಂದಲೇ ಕೊಂಡೋತ್ಸವಕ್ಕೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವ ಮೂಲಕ ಶನಿವಾರ ಮುಂಜಾನೆ 5ಗಂಟೆ ಸಮಯದಲ್ಲಿ ಪೂಜಾ ಕೈಂಕರ್ಯಗಳ್ಳನ್ನು ನೆರವೇರಿಸಿ ನಂತರ ದೇವಾಲಯದ ಅರ್ಚಕರು ದೇವರನ್ನು ಹೊತ್ತು, ಕೊಂಡ ಹಾಯ್ದರು. ಹರಕೆ ಹೊತ್ತ ಭಕ್ತರು ಕೊಂಡಕ್ಕೆ ಹರಳು ಬೀಜಗಳನ್ನು ಹಾಕಿದರು. ಹೀಗೆ ಮಾಡುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.

ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಬಡಗುಡಮ್ಮ, ಎಲ್ಲಮ್ಮ ಮತ್ತು ಉಪ್ಪಾರಹಳ್ಳಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು. ಉಪ್ಪಾರಹಳ್ಳಿಯಿಂದ ತಂಬಿಟ್ಟು ಮತ್ತು ಮಡೆ ಆರತಿಯನ್ನು ಬೆಳಗಿನ ಜಾವ 3 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತರಲಾಯಿತು.ಮೆರವಣಿಗೆ ನಂತರ ದೇವಾಲಯದ ಅವರಣದಲ್ಲಿ ಆರತಿಗಳನ್ನು ಸಾಲಿನಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು. ತಂಬಿಟ್ಟಿನ ಆರತಿಯನ್ನ ನಾನಾ ಬಗೆಯ ಹೂ ಗಳಿಂದ ಅಲಂಕಾರಗೊಳಿಸಿದ್ದರು.

ಶನಿವಾರ ಸಂಜೆ 5.30 ರ ಸಮಯದಲ್ಲಿ ಜರುಗಿದ ಬಡಗುಡಮ್ಮ ದೇವರ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ರಥಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ರಥದತ್ತ ಬಾಳೆ ಹಣ್ಣು ಜವನ ಎಸೆದು ಹರಕೆ ಕಾಣಿಕೆಗಳನ್ನ ದೇವರಿಗೆ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡರು.ಶುಸುತ್ರವಾಗಿ ಬಹಳ ವಿಜೃಂಭಣೆಯಿಂದ ಜಾತ್ರೆ ನೆಡೆಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ