Friday, November 20, 2026

ಪ್ರಾಯೋಗಿಕ ಆವೃತ್ತಿ

ಸಾಧನೆ ಮಾತಾಗಬೇಕೇ ಹೊರತು, ಮಾತೇ ಸಾಧನೆಯಾಗಬಾರದು : ಪಿ.ಎಂ.ನರೇಂದ್ರಸ್ವಾಮಿ

‘ಸಾಧನೆ ಮಾತಾಗಬೇಕೇ ಹೊರತು ಮಾತೇ ಸಾಧನೆಯಾಗಬಾರದು’, ಬರಡಾದ ಬದಕು, ಅಸಹಾಯಕತೆಯ ಸಾಂಸರೀಕ ಜೀವನ ಸಾಗಿಸುತ್ತಿರುವ ಹಿಂದುಳಿದ ಸಮುದಾಯದ ಬದುಕಿಗೆ ಆಸರೆಯಾದಾಗ ಮಾತ್ರ ಜನಪ್ರತಿನಿಧಿಗಳು ಸಲ್ಲಿಸಿದ ಜನಸೇವೆಗೆ ತೃಪ್ತಿ ಸಿಗುತ್ತದೆ, ನನ್ನ ಅಧಿಕಾರ ಅವಧಿಯಲ್ಲಿ ಬಡವರಿಗಾಗಿ 21 ಸಾವಿರಕ್ಕೂ ಹೆಚ್ಚು ಮನೆಗಳನ್ನು ತಂದು ಕೊಟ್ಟಿದ್ದಾನೆ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯ ಕಾಂಗ್ರೆಸ್ ನಿವೇಶನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಐದು ವರ್ಷದ ಅವಧಿಯಲ್ಲಿ ಒಂದು ಮನೆಯನ್ನು ಬಡವರಿಗೆ ನೀಡಿಲ್ಲ, ಮಳವಳ್ಳಿ ಪಟ್ಟಣದ ಬಿಪಿಎಲ್ ಕುಟುಂಬಗಳಿಗೆ ಸರ್ಕಾರದಿಂದ 500 ಮನೆಗಳನ್ನು ತರಲಾಯಿತು, ಆದರೇ ಈಗಿನ ಶಾಸಕರು ನಾನೇ ತಂದೆ ಎಂದು ಹೇಳುತ್ತಾರೆ, ಸರ್ಕಾರದ ದಾಖಲೆಗಳು ಯಾರ ಅವಧಿಯಲ್ಲಿ ನೀಡಲಾಗಿದೆ ಎನ್ನುವುದನ್ನು ತಿಳಿಸುತ್ತದೆ, ನಾನು ತಂದಿರುವ 500 ಮನೆಗಳಲ್ಲಿ ಅರ್ಹತೆ ಇಲ್ಲದವರಿಗೂ ಮನೆಗಳನ್ನು ಹಂಚಲಾಗಿದೆ ಎಂದು ದೂರಿದರು.

ಅಹಿಂದ ಚಳುವಳಿಯ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಅವರ ನೇತೃತ್ವದ 5 ವರ್ಷದ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಯೋಜನೆ ಹಾಗೂ ಬಜೆಟ್‌ನಲ್ಲಿ ಹಿಂದುಳಿದ ಸಮುದಾಯಕ್ಕೆ ಸಿಂಹಪಾಲಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಬಡವರು ಹವಿನಿಂದ ಬಳಲುಬಾರದೆಂದು ಕಾಂಗ್ರೆಸ್ ಸರ್ಕಾರ ಪ್ರತಿ ಪಡಿತದಾರರಿಗೆ ತಲಾ 10 ಕೆಜಿ ಅಕ್ಕಿಯನ್ನು ನೀಡಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾರ 7 ಕೆಜಿಗೆ ಇಳಿಸಿತು. ಬಿಜೆಪಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 5 ಕೆಜಿಗೆ ಇಳಿಸಿತು ಎಂದು ವಿವರಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಅಕ್ಕಿ, ಗೃಹಜ್ಯೋತಿ ಕಾರ್ಯಕ್ರಮದಡಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮನೆಯ ಯಜಮಾನಿ ಖಾತೆಗೆ ತಲಾ ಮಾಸಿಕ 2 ಸಾವಿರ ರೂ ನಗದು ಜಮೆ ಮಾಡಲಾಗುವುದು ಹಾಗೂ ನಿರುದ್ಯೋಗಿ ಪದವಿ ಯುವಕರಿಗೆ 3 ಸಾವಿರ ಹಾಗೂ ಡಿಪ್ಲೊಮೋ ಪದವೀಧರಿಗೆ 1500 ರೂಗಳನ್ನು ನೀಡಲಾಗುವುದು. ಹಿಂದುಳಿದ ಸಮಾಜದ ಬದುಕನ್ನು ಹಸನು ಮಾಡುವ ಶಕ್ತಿಯನ್ನು ನೀಡಲು ವಿಧಾನಸಭಾ ಚುನಾವಣೆಯಲ್ಲಿ ಆರ್ಶಿವದಿಸಬೇಕೆಂದು ಮನವಿ ಅವರು ಮಾಡಿದರು.

ಸವಿತ ಸಮಾಜ, ಮಡಿವಾಳ ಸಮಾಜ, ವಿಶ್ವಕರ್ಮ ಸಮುದಾಯ ಸೇರಿದಂತೆ ಇತರೆ ಸಮುದಾಯದ ಮುಖಂಡರು ವಿಧಾನಪರಿಷತ್ ಸದಸ್ಯ ಮಧುಜಿ ಮಾದೇಗೌಡ ಹಾಗೂ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ವಿಶ್ವಕರ್ಮ ಸಂಘದ ಅಧ್ಯಕ್ಷ ಪ್ರಕಾಶ್, ಕುಂಬಾರಶೆಟ್ಟರ ಸಮಾಜದ ಮುಖಂಡ ಪುಟ್ಟಶೆಟ್ಟಿ, ಮಡಿವಾಳ ಸಮಾಜದ ಮುಖಂಡ ಕೃಷ್ಣ, ಪ್ರಸನ್ನ, ಚಿಕ್ಕೈದಚಾರಿ , ಸವಿತಾ ಸಮಾಜದ ಮುಖಂಡ ಹಮನಯ್ಯ, ಕುನ್ನಯ್ಯ, ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ