ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕರಾವಳಿ ಜಿಲ್ಲೆಗಳಲ್ಲಿ ಸ್ಥಾಪನೆಯಾದ ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ವಿಜಯ ಬ್ಯಾಂಕ್ ಹಾಗೂ ಭದ್ರಾವತಿ ಕಬ್ಬಿಣದ ಕಾರ್ಖಾನೆಗಳನ್ನು ಮುಳುಗಿಸಿದೆ ಎಂದು ಕಾಂಗ್ರೆಸ್ ಕಿಡಿಕಾರಿದ್ದು, ಕನ್ನಡಗರ ಆಸ್ಮಿತೆಗೆ ಕೊಳ್ಳಿ ಇಡಲು ಬಿಜೆಪಿ ಕುತಂತ್ರ ನಡೆಸುತ್ತಿದೆ ಎಂಬುದನ್ನು ಜನರ ಮುಂದಿಟ್ಟಿದೆ.
ಕರ್ನಾಟಕದ ಅಸ್ಮಿತೆಗೆ ಕೊಳ್ಳಿ ಇಡಲು ಹವಣಿಸುತ್ತಿರುವ ಬಿಜೆಪಿಯ ನಾಗಪುರದ ನೌಕರರು ಮುಳುಗಿಸಿದ ಹೆಮ್ಮೆಯ ಸಂಸ್ಥೆಗಳು ಒಂದೆರಡಲ್ಲ.
ಕರ್ನಾಟಕದ ಹೆಮ್ಮೆಯ ಸಂಸ್ಥೆಗಳನ್ನು ಕಳೆದುಕೊಂಡ ಕನ್ನಡಿಗರು ನಂದಿನಿಯನ್ನೂ ಕಳೆದುಕೊಳ್ಳಲು ತಯಾರಿಲ್ಲ.
ಅಮೂಲ್ ಪರ ವಕಾಲತ್ತು ವಹಿಸುವ @BJP4Karnataka ನಾಯಕರು ಈ ಹಿಂದಿನ ಅವಾಂತರಗಳ ಬಗ್ಗೆ ಮಾತಾಡುವರೇ? pic.twitter.com/xGeMk30QhV
— Karnataka Congress (@INCKarnataka) April 11, 2023
“>
ಕರ್ನಾಟಕದ ಅಸ್ಮಿತೆಗೆ ಕೊಳ್ಳಿ ಇಡಲು ಹವಣಿಸುತ್ತಿರುವ ಬಿಜೆಪಿಯ ನಾಗಪುರದ ನೌಕರರು ಮುಳುಗಿಸಿದ ಹೆಮ್ಮೆಯ ಸಂಸ್ಥೆಗಳು ಒಂದೆರಡಲ್ಲ. ಕರ್ನಾಟಕದ ಹೆಮ್ಮೆಯ ಸಂಸ್ಥೆಗಳನ್ನು ಕಳೆದುಕೊಂಡ ಕನ್ನಡಿಗರು ನಂದಿನಿಯನ್ನೂ ಕಳೆದುಕೊಳ್ಳಲು ತಯಾರಿಲ್ಲ. ಅಮೂಲ್ ಪರ ವಕಾಲತ್ತು ವಹಿಸುವ ಬಿಜೆಪಿ ನಾಯಕರು ಈ ಹಿಂದಿನ ಅವಾಂತರಗಳ ಬಗ್ಗೆ ಮಾತಾಡುವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
LIC ಜನವರಿಯಿಂದ ಮಾರ್ಚ್ 2023ರ ವರೆಗೆ ಅದಾನಿಯ 3.75 ಲಕ್ಷ ಷೇರುಗಳನ್ನು ಖರೀದಿಸಿತು! ಆರ್ಥಿಕ ಸಂಕಷ್ಟಗಳನ್ನು ಎದುರಿಸಲು ದೇಶದ ಕೋಟಿಗಟ್ಟಲೆ ಜನ ತಮ್ಮ ಜೀವನದ ಉಳಿತಾಯವನ್ನು ಎಲ್‌ಐಸಿಯಲ್ಲಿ ಹೂಡಿಕೆ ಮಾಡುತ್ತಾರೆ, ಆದರೆ ಮೋದಿಯವರು ಜನರ ಸಮಸ್ಯೆಗಳಿಗೆ ಬಳಕೆಯಾಗಬೇಕಾದ ಹಣವನ್ನು ಅದಾನಿ ಹಿತಕ್ಕಾಗಿ ಏಕೆ ಖರ್ಚು ಮಾಡಿದರು? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಧ್ವನಿ ಎತ್ತಿದೆ.
ಕಳೆದ 3 ವರ್ಷಗಳಿಂದ ನಂದಿನಿಯನ್ನು ಅಮೂಲ್ ಜತೆ ವಿಲೀನ ಮಾಡುವ ಪ್ರಯತ್ನ ನಡೆಯುತ್ತಿದೆ. ಅಮೂಲ್ ಜೊತೆ ವ್ಯಾಪಾರ ಮಾಡಲು ನಂದಿನಿ ಸಂಸ್ಥೆ ಒಪ್ಪಿಗೆ ನೀಡಿರುವ ಪತ್ರವನ್ನು ಈಗಾಗಲೇ 2021ರಲ್ಲೇ ನೀಡಲಾಗಿದೆ. ನಂದಿನಿ ಸಂಸ್ಥೆಯನ್ನು ಮುಳುಗಿಸಿ ಅಮೂಲ್ ಮೂಲಕ ಅದನ್ನು ವಶಪಡಿಸಿಕೊಳ್ಳಲು ಹುನ್ನಾರ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.




